ಬೆಂಗಳೂರು, ಸೆ 09 (DaijiworldNews/DB): ಗಣೇಶ ಮೂರ್ತಿ ಮೆರವಣಿಗೆ ವೇಳೆ ನಟ ಉಪೇಂದ್ರ ಸಿನಿಮಾ ಶೈಲಿಯಲ್ಲಿ ವ್ಯಕ್ತಿಯೊಬ್ಬ ಚಾಕು ಹಿಡಿದು ಗಣೇಶನಿಗೆ ಆವಾಜ್ ಹಾಕಿದ ಘಟನೆ ಯಶವಂತಪುರ ದೇವರಾಯಪಾಳ್ಯದಲ್ಲಿ ನಡೆದಿದೆ.
ಯಶವಂತಪುರ ದೇವರಾಯಪಾಳ್ಯದಲ್ಲಿ ಅದ್ದೂರಿಯಾಗಿ ಗಣೇಶ ಮೂರ್ತಿ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬ ಉಪೇಂದ್ರ ಸಿನಿಮಾ ಶೈಲಿಯಲ್ಲಿ ಚಾಕು ಹಿಡಿದುಕೊಂಡು ದೇವರಿಗೆ ಆವಾಜ್ ಹಾಕಿದ್ದಾನೆ. ಈ ವೇಳೆ ಗಲಾಟೆ ನಡೆದಿದ್ದು ,20ಕ್ಕೂ ಹೆಚ್ಚು ಕಾರುಗಳಿಗೆ ಹಾನಿಯಾಗಿದೆ.
ಮೆರವಣಿಗೆ ವೇಳೆ ದುಷ್ಕೃತ್ಯ ಎಸಗಿದ ಯುವಕನನ್ನು ಸದ್ಯ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.