ಮುಂಬೈ, ಸೆ 07 (DaijiworldNews/MS): 1993ರ ಮುಂಬೈ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಸಮಾಧಿ ಸುತ್ತ ಅಮೃತಶಿಲೆಯ ಅಳವಡಿಸಲಾಗಿದ್ದು, ಎಲ್ಇಡಿ ಲೈಟಿಂಗ್ನೊಂದಿಗೆ ನವೀಕರಿಸಲಾಗಿದ್ದು, ಸಧ್ಯ ವಿವಾದ ಭುಗಿಲೆದ್ದಿದೆ. ಐದು ತಿಂಗಳ ಹಿಂದಿನಿಂದ ಇದರ ಕೆಲಸ ನಡೆಯುತ್ತಿದೆ . ಈ ಬಗ್ಗೆ ಸುದ್ದಿ ಬಿತ್ತರವಾಗುತ್ತಿದಂತೆ , ಮಹಾರಾಷ್ಟ್ರ ಸರ್ಕಾರವು ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ಬಿಜೆಪಿ ನಾಯಕ ರಾಮ್ ಕದಮ್ ದೂರಿನ ಮೇಲೆ ಮುಂಬೈ ಪೊಲೀಸರ ತಂಡವು ಸ್ಮಶಾನವನ್ನು ತಲುಪಿದಾಗ ಅವರಿಗೆ ನಿಜವಾಗಿಯೂ ಅಚ್ಚರಿ ಕಾದಿತ್ತು. ಯಾಕೂಬ್ ಮೆಮೊನ್ ಸಮಾಧಿಯ ಸುತ್ತಲೂ ಅಲಂಕಾರಿ ಲೈಟಿಂಗ್ ಅನ್ನು ತೆಗೆದುಹಾಕಲಾಯಿತು. ಇದಕ್ಕೆ ಹಿಂದಿನ ಉದ್ಧವ್ ಠಾಕ್ರೆಯ ಮಹಾ ವಿಕಾಸ್ ಅಘಾಡಿ ಸರ್ಕಾರವೇ ಕಾರಣ ಎಂದು ಬಿಜೆಪಿ ನೇರವಾಗಿ ಆರೋಪಿಸಿದೆ.
ರಾಜ್ಯದಲ್ಲಿ ಶಿವಸೇನೆ-ಕಾಂಗ್ರೆಸ್-ಎನ್ಸಿಪಿ ಮೈತ್ರಿ ಎಂವಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಉದ್ಧವ್ ಠಾಕ್ರೆ ಆಳ್ವಿಕೆಯಲ್ಲಿ ಇದನ್ನ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. 'ಯಾಕೂಬ್ ಮೆನನ್ ಸಮಾಧಿಯನ್ನ ದೇವಾಲಯವಾಗಿ ಪರಿವರ್ತಿಸಿದಾಗ ಉದ್ಧವ್ ಠಾಕ್ರೆ ಏಕೆ ಮೌನವಾಗಿದ್ದರು?' ಎಂದು ಬಿಜೆಪಿ ನಾಯಕ ರಾಮ್ ಕದಮ್ ಪ್ರಶ್ನಿಸಿದ್ದಾರೆ.