ಮಡಿಕೇರಿ, ಸೆ 07 (DaijiworldNews/MS): ಮಂಗಳೂರಿನ ಶಿಕ್ಷಣ ಇಲಾಖೆಯ ನೌಕರರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿಯ ಲಾಡ್ಜ್ ಒಂದಲ್ಲಿ ನಡೆದಿದೆ.
ಮಂಗಳೂರಿನ ಶಿಕ್ಷಣ ಇಲಾಖೆಯಲ್ಲಿ ನೌಕರನಾಗಿರುವ ಶಿವಾನಂದ್ (45) ಮೃತ ವ್ಯಕ್ತಿ. ಇವರು ಬಜ್ಪೆ ಮೂಲದವರು ಎಂದು ತಿಳಿದುಬಂದಿದೆ. ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿಯ ಲಾಡ್ಜ್ ನಲ್ಲಿ ಶಿವಾನಂದ್ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರಕಾರಣ ತಿಳಿದುಬಂದಿಲ್ಲ.
ಶಿವಾನಂದ್ ಅವರು ಮಂಗಳೂರು ದಕ್ಷಿಣ ವಿಭಾಗದ ಬಿಇಓ ಕಚೇರಿಯಲ್ಲಿ ಸೂಪರಿಟೆಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.
ಸಹೋದರ ಕೃಷ್ಣಾನಂದ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಮಡಿಕೇರಿ ನಗರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.