ನವದೆಹಲಿ, ಸೆ 07 (DaijiworldNews/MS): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ವಾರ ನೀಡಿದ ದೆಹಲಿಗೆ ಭೇಟಿ ಪ್ರತಿಪಕ್ಷಗಳ ಗಮನ ಸೆಳೆಯುವಂತೆ ಮಾಡಿದೆ.
ಬುಧವಾರ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ನಿತೀಶ್ ಕುಮಾರ್, ಪ್ರಶಾಂತ್ ಕಿಶೋರ್ ಬಹುಶಃ ಬಿಜೆಪಿಗೆ ಸಹಾಯ ಮಾಡಲು ಬಯಸಿರಬಹುದು ಎಂದು ಟೀಕಿಸಿದ್ದಾರೆ.
ಸಿಎಂ ನಿತೀಶ್ ಕುಮಾರ್ ಈ ವಾರ ಕಾಂಗ್ರೆಸ್ನ ರಾಹುಲ್ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜೆಡಿಎಸ್ನ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಪ್ರತಿಪಕ್ಷಗಳ ನಾಯಕರ ಜೊತೆ ಸಭೆ ನಡೆಸಿದ್ದರು.
2024ರ ರಾಷ್ಟ್ರೀಯ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳು ಒಗ್ಗಟ್ಟಿನ ಬಲವನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿರುವ ನಿತೀಶ್ ಕುಮಾರ್ ಬಿಜೆಪಿಯೊಂದಿಗಿನ ತಮ್ಮ ಸಂಬಂಧವನ್ನು ಮುರಿದುಕೊಂಡಿದ್ದರು.
ನಾವು ಮುಖ್ಯ ಮುಂಭಾಗವಾಗಲು ಬಯಸುತ್ತೇವೆ, ತೃತೀಯ ರಂಗವಲ್ಲ ಎಂದ ನಿತೀಶ್ ಕುಮಾರ್ ಅವರು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ವಿರುದ್ಧವೂ ವಾಗ್ದಾಳಿ ನಡೆಸಿದರು. “ಇತರ ರಾಜಕೀಯ ಪಕ್ಷಗಳೊಂದಿಗೆ ಕೆಲಸ ಮಾಡುವುದು ಅವರ ವ್ಯವಹಾರವಾಗಿದೆ. ಅವರು ಬಿಹಾರದಲ್ಲಿ ಏನು ಮಾಡಬೇಕಿದ್ದರೂ ನಮಗೆ ಸಂಬಂಧಿಸಿದ್ದಲ್ಲ. 2005ರಿಂದ ಏನು ಮಾಡಲಾಗಿದೆ ಎಂಬುದರ ‘ಎಬಿಸಿ’ ಅವರಿಗೆ ತಿಳಿದಿದೆಯೇ? ಅವರ ಹೇಳಿಕೆಗಳನ್ನು ನೋಡುತ್ತಿದ್ದರೆ ಅವರು ಬಿಜೆಪಿಯನ್ನು ಉಳಿಸಲು ಮತ್ತು ಬಿಜೆಪಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಪ್ರಶಾಂತ್ ಕಿಶೋರ್ಗೆ ಪ್ರಚಾರವಷ್ಟೇ ಮುಖ್ಯ ಎಂದು ವಾಗ್ದಾಳಿ ನಡೆಸಿದರು .