ಮುಂಬೈ, ಸೆ 07 (DaijiworldNews/MS): ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂಬೈ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೃಹ ಸಚಿವಾಲಯದ ಜೊತೆ ಭದ್ರತಾ ಅಧಿಕಾರಿಯ ಸೋಗಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಸಮೀಪ ಸುಳಿಯಲು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಮುಂಬೈನಲ್ಲಿ ಬಂಧಿಸಲಾಗಿದೆ.
ಮಲಬಾರ್ ಹಿಲ್ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಧೂಲೆ ನಿವಾಸಿ ಹೇಮಂತ್ ಪವಾರ್ (32) ವ್ಯಕ್ತಿಯನ್ನು ಬಂಧಿಸಲಾಗಿದೆ.
ಅಮಿತ್ ಶಾ ಅವರು ಸೋಮವಾರ ಮುಂಬೈಗೆ ಭೇಟಿ ನೀಡಿದ್ದಾಗ ಈ ಭದ್ರತಾ ಲೋಪ ಉಂಟಾಗಿತ್ತು. ಬಂಧಿತ ವ್ಯಕ್ತಿ ಆಂಧ್ರ ಪ್ರದೇಶದ ಸಂಸದರೊಬ್ಬರ ಖಾಸಗಿ ಭದ್ರತಾ ಸಿಬ್ಬಂದಿ ಎಂದು ಗುರುತಿಸಿರುವುದಾಗಿ ವರದಿ ಮಾಡಿದೆ.