ನವದೆಹಲಿ, ಸೆ 07 (DaijiworldNews/MS): ಇಂದಿನಿಂದ ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಂಗ್ರೆಸ್ನ ‘ಭಾರತ್ ಜೋಡೋ ಯಾತ್ರೆ’ ಆರಂಭವಾಗುತ್ತಿದೆ. ಕಾಂಗ್ರೆಸ್ ಸಂಸದ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಯಾತ್ರೆ ಆರಂಭಿಸಿದ್ದು , 150 ದಿನಗಳ ಈ ಸುದೀರ್ಘ ಪಯಣದಲ್ಲಿ ರಾಹುಲ್ ಗಾಂಧಿ ಕಂಟೈನರ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಭಾರತ್ ಜೋಡೋ ಯಾತ್ರೆಯೂ 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮಾಸ್ಟರ್ ಸ್ಟ್ರೋಕ್' ಯೋಜನೆ ಎಂದೇ ಪರಿಗಣಿಸಲಾಗುತ್ತಿದೆ.
'ಭಾರತ್ ಜೋಡೋ ಯಾತ್ರೆ' 3,570 ಕಿಲೋಮೀಟರ್ ಸಾಗಲಿದ್ದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿದ್ದು, ರಾಹುಲ್ ಗಾಂಧಿ ಸುಮಾರು 150 ದಿನಗಳ ಕಾಲ ಪಾಳ್ಗೊಳ್ಳಲಿದ್ದಾರೆ.
ಯಾತ್ರೆ ವೇಳೆ ರಾಹುಲ್ ಗಾಂಧಿ ಸಂಪೂರ್ಣ ಪ್ರಯಾಣವನ್ನು ಸರಳವಾಗಿ ಪೂರ್ಣಗೊಳಿಸುತ್ತಾರೆ ಎಂದು ಪಕ್ಷ ಸ್ಪಷ್ಟಪಡಿಸಿದೆ. ಇದಕ್ಕಾಗಿ ಕಂಟೈನರ್ ನಲ್ಲಿ ಮಲಗಲು ಹಾಸಿಗೆ, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಇನ್ನು ಅವರ ಜೊತೆಗಿರುವ ಪ್ರಯಾಣಿಕರು ಯಾವುದೇ ಪಂಚತಾರಾ ಹೋಟೆಲ್ನಲ್ಲಿ ತಂಗುವಂತಿಲ್ಲ. ಕಂಟೈನರ್ ನಲ್ಲಿ ಮಲಗಲು ಹಾಸಿಗೆ, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಇಂತಹ 50ಕ್ಕೂ ಹೆಚ್ಚು ಕಂಟೈನರ್ ಗಳನ್ನು ಸಿದ್ಧಪಡಿಸಲಾಗಿದ್ದು, ಪ್ರಯಾಣದ ಪ್ರಕಾರ ತಮ್ಮ ಪ್ರಯಾಣದ ಅಂತ್ಯದ ನಂತರ, ಪ್ರಯಾಣಿಕರು ಅದೇ ಕಂಟೈನರ್ನಲ್ಲಿ ರಾತ್ರಿಯಿಡಿ ಹಳ್ಳಿಯಲ್ಲಿ ಉಳಿಯಲಿದ್ದಾರೆ.