ಪಂಜಾಬ್ , ಸೆ 07 (DaijiworldNews/MS): ನಿಶ್ಚಿತಾರ್ಥ ಎಂಬುದು ವಧುವನ್ನು ಲೈಂಗಿಕವಾಗಿ ಬಳಸಿಕೊಳ್ಳಲು ವರನಿಗೆ ನೀಡುವ ಹಕ್ಕಲ್ಲ ಎಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ.
ವಿವಾಹ ನಿಶ್ಚಿತಾರ್ಥ, ಪರಸ್ಪರ ಭೇಟಿಯಾಗುತ್ತಿರುವ ವರನಿಗೆ ಆಕೆಯ ಒಪ್ಪಿಗೆಯಿಲ್ಲದೆ ತನ್ನ ಪ್ರೇಯಸಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಹಕ್ಕು ಅಥವಾ ಸ್ವಾತಂತ್ರ್ಯವನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ನಿಶ್ಚಿತಾರ್ಥದ ಬಳಿಕ ಅತ್ಯಾಚಾರವೆಸಗಿರುವ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಸಂದರ್ಭದಲ್ಲಿ ನ್ಯಾಯಾಧೀಶ ವಿವೇಕ್ ಪುರಿ ಅವರಿದ್ದ ಏಕ ಸದಸ್ಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಜನವರಿ 2022 ರಲ್ಲಿ ಜೋಡಿಗಳ ನಿಶ್ಚಿತಾರ್ಥ ಸಮಾರಂಭದ ಬಳಿಕ ಅವರು ಆಗಾಗ್ಗೆ ಭೇಟಿಯಾಗುತ್ತಿದ್ದರು. ವರನು ತನ್ನ ಬಾಳ ಸಂಗಾತಿಯಾಗಬೇಕಾಗಿದ್ದ ಯುವತಿಗೆ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ಒತ್ತಾಯಿಸುತ್ತಿದ್ದು ಆದರೆ ಆಕೆ ಪ್ರತಿ ಬಾರಿ ನಿರಾಕರಿಸಿದ್ದಳು.
ನಿಶ್ಚಿತಾರ್ಥ ಮತ್ತು ವಿವಾಹದ ನಡೆಯಬೇಕಾಗಿದ್ದ ಮುನ್ನ ಅವಧಿಯೂ, ವಧುವಿನ ಸಮ್ಮತಿಗೆ ವಿರುದ್ಧವಾಗಿ ಲೈಂಗಿಕವಾಗಿ ಬಳಸಿಕೊಳ್ಳಲು ವರನಿಗೆ ನೀಡುವ ಹಕ್ಕಲ್ಲ ಎಂದು ಕೋರ್ಟ್ ಹೇಳಿದೆ.