ಪಂಜಾಬ್, ಸೆ 07 (DaijiworldNews/MS): ಕೌಟುಂಬಿಕ ಕಲಹದಿಂದ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಅಳುತ್ತಿದ್ದ ತನ್ನ ಮೂರೂವರೆ ವರ್ಷದ ಗಂಡು ಮಗುವಿಗೆ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಪಂಜಾಬ್ನ ಲುಧಿಯಾನ ಜಿಲ್ಲೆಯ ಚುಡಾನಿ ಕಲಾನ್ ಗ್ರಾಮದಲ್ಲಿ ವರದಿಯಾಗಿದೆ.
ವೈವಾಹಿಕ ಜೀವನದಲ್ಲಿ ನೊಂದಿದ್ದ ಆರೋಪಿ ರೂಪಿಂದರ್ ಕೌರ್ ಎಂಬ ಮಹಿಳೆ ಪತಿಯಿಂದ ದೂರವಾಗಿ ತನ್ನ ಮೂವರು ಮಕ್ಕಳೊಂದಿಗೆ ತಾಯಿ ಮನೆಯಲ್ಲಿ ಕಳೆದ ಎರಡು ವರ್ಷದಿಂದ ವಾಸಿಸುತ್ತಿದ್ದಳು. ಅಲ್ಲದೆ ದಾಂಪತ್ಯ ಜೀವನ ಹಳಿ ತಪ್ಪಿದ ಕಾರಣ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ.
ಜೋರಾಗಿ ಅಳುತ್ತ ಹಠ ಮಾಡುತ್ತಿದ್ದ ತನ್ನ ಮೂರೂವರೆ ವರ್ಷದ ಗಂಡು ಮಗುವಿಗೆ ಬೆಂಕಿ ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಗುವನ್ನು ಚಂಡೀಗಢದ ಪಿಜಿಐಎಂಇಆರ್ಗೆ ದಾಖಲಿಸಲಾಗಿದೆ. ಶೇ. 60ರಷ್ಟು ಸುಟ್ಟ ಗಾಯಗಳ ನಂತರ ಮಗುವಿನ ಸ್ಥಿತಿ ಗಂಭೀರವಾಗಿದೆ ತನ್ನ ಮಗುವಿಗೆ ಬೆಂಕಿ ಹಚ್ಚಿದ ಮಹಿಳೆಯ ತಾಯಿ ಮಂಜಿತ್ ಕೌರ್ ನೀಡಿದ ದೂರಿನ ಮೇರೆಗೆ ಆರೋಪಿ ರೂಪಿಂದರ್ ಕೌರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಸಾವು-ನೋವಿನ ಮಧ್ಯೆ ಹೋರಾಡುತ್ತಿರುವ ಮಗುವನ್ನು ಹರ್ಮನ್ ಎಂದು ಗುರುತಿಸಲಾಗಿದೆ. ರೂಪಿಂದರ್ ಕೌರ್ ಅವರ ಮೂವರು ಮಕ್ಕಳಲ್ಲಿ ಈತ ಕೊನೆಯ ಮಗುವಾಗಿದ್ದ. ತಾಯಿಯ ಸಮಾಧಾನಕ್ಕೂ ಕೇಳದೆ ಹರ್ಮನ್ ಜೋರಾಗಿ ಅಳುತ್ತಿದ್ದ. ಆತನನ್ನು ಸಮಾಧಾನ ಮಾಡಲು ಸಾಧ್ಯವಾಗದೆ ಕೋಪದಿಂದ ರೂಪಿಂದರ್ ಕೌರ್ ಬೆಂಕಿ ಹಚ್ಚಿ ಸುಟ್ಟಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.