ಕೋಲ್ಕತ್ತಾ, ಸೆ 07 (DaijiworldNews/HR): ಆಗಸ್ಟ್ 22 ರಂದು ಕೋಲ್ಕತ್ತಾದ ಬಾಗುಹತಿ ಪ್ರದೇಶದಿಂದ ಕಿಡ್ನ್ಯಾಪ್ ಆಗಿದ್ದ ಇಬ್ಬರು ವಿದ್ಯಾರ್ಥಿಗಳು ಕೋಲ್ಕತ್ತಾ ಬಳಿ ರಸ್ತೆ ಬದಿಯ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತರನ್ನು ಅತಾನು ಡೇ ಮತ್ತು ಅಭಿಷೇಕ್ ನಸ್ಕರ್ ಎಂದು ಗುರುತಿಸಲಾಗಿದ್ದು, ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಆರೋಪಿ ಚೌಧರಿಗೆ ಮೋಟಾರ್ ಸೈಕಲ್ ಖರೀದಿಸಲು ಅತಾನು 50,000 ರೂಪಾಯಿ ನೀಡಿದ್ದ. ಆದ್ರೆ, ಹಲವು ತಿಂಗಳು ಕಳೆದರೂ ಆರೋಪಿ ದ್ವಿಚಕ್ರ ವಾಹನ ಖರೀದಿಸಿಲ್ಲ, ಹಣ ವಾಪಸ್ ನೀಡಿಲ್ಲ. ಈ ವೇಳೆ ಅತಾನು ಹಣ ವಾಪಸ್ ಬೇಕು ಎಂದು ಕೇಳಿದಾಗ ಅವರ ನಡುವೆ ವಿವಾದ ನಡೆದಿತ್ತು.
ಇನ್ನು ಆರೋಪಿಗಳು ಅತಾನು ಡೇ ಮತ್ತು ಅಭಿಷೇಕ್ ನಸ್ಕರ್ ಇಬ್ಬರನ್ನೂ ಬೈಕ್ ಖರೀದಿಸುವುದಾಗಿ ಹೇಳಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಆದರೆ ಮಕ್ಕಳು ಸಂಜೆಯಾದ್ರೂ ಮನೆಗೆ ಬರಲ್ಲಿಲ್ಲವೆಂದು ಕಗಂಲಾಗಿದ್ದ ಪೋಷಕರಿಗೆ ಆರೋಪಿಗಳು ಕರೆ ಮಾಡಿನಿಮ್ಮ ಮಕ್ಕಳನ್ನು ಅಪಹರಿಸಲಾಗಿದೆ ಎಂದು ಹೇಳಿ ಬೈಕ್ ಖರೀದಿಸಲು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಪೋಷಕರು ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು.
ಇದೀಗ ಸಿಕ್ಕಿಬಿದ್ದ ಆರೋಪಿಗಳು ಅತಾನು ಡೇ ಮತ್ತು ಅಭಿಷೇಕ್ ನಸ್ಕರ್ ಅನ್ನು ಕಾರಿನಲ್ಲೇ ಕತ್ತುಹಿಸುಕಿ ಕೊಂದು ಹಳ್ಳಕ್ಕೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.