ನವದೆಹಲಿ, ಸೆ 06 (DaijiworldNews/HR): ನಾನು ಪ್ರಧಾನಿ ಹುದ್ದೆಯ ಹಕ್ಕುದಾರನೂ ಅಲ್ಲ, ನಾನು ಅದನ್ನು ಬಯಸುವುದಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಅಭ್ಯರ್ಥಿತನದ ಬಗ್ಗೆ ಊಹಾಪೋಹಗಳನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನಿರಾಕರಿಸಿದ್ದಾರೆ.
ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರನ್ನು ಭೇಟಿ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್, ನಾವು ಒಟ್ಟಿಗೆ ಇದ್ದೇವೆ, ಅದಕ್ಕಾಗಿಯೇ ನಾನು ಇಲ್ಲಿಗೆ ಬರುತ್ತಿದ್ದೇನೆ' ಎಂದಿದ್ದಾರೆ.
ಇನ್ನು ತಮ್ಮ ಪ್ರಧಾನಿ ಅಭ್ಯರ್ಥಿತನದ ಬಗ್ಗೆ ಊಹಾಪೋಹಗಳನ್ನು ನಿರಾಕರಿಸಿದ ಅವರು, 'ನಾನು ಹಕ್ಕುದಾರರೂ ಅಲ್ಲ, ನಾನು ಅದನ್ನು ಬಯಸುವುದಿಲ್ಲ' ಎಂದು ಹೇಳಿದ್ದಾರೆ.