ನವದೆಹಲಿ, ಸೆ 06 (DaijiworldNews/HR): ಭಾರತ್ ಬಯೋಟೆಕ್ನ ಭಾರತದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆಗೆ ಡಿಸಿಜಿಐ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.
ಭಾರತ್ ಬಯೋಟೆಕ್ನ ಮೂಗಿನ ಕೊರೊನಾ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ ನೀಡಲಾಗಿದ್ದು, ಇದು ಭಾರತದಲ್ಲಿಯೇ ಮೂಗಿನ ಮೂಲಕ ನೀಡುವಂತ ಕೋವಿಡ್ ಮೊದಲ ಲಸಿಕೆಯಾಗಿದೆ.
ಇನ್ನು ಭಾರತ್ ಬಯೋಟೆಕ್ನ ಮೂಗಿನ ಕೋವಿಡ್ ಲಸಿಕೆಗೆ ಸಿಡಿಎಸ್ಸಿಒ ಅನುಮೋದನೆ ದೊರೆತಿದ್ದು, ಇದು ಕೋವಿಡ್ ವಿರುದ್ಧದ ಭಾರತದ ಹೋರಾಟಕ್ಕೆ ದೊಡ್ಡ ಉತ್ತೇಜನ ಎಂದು ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.