ಬೆಂಗಳೂರು, ಸೆ 06 (DaijiworldNews/MS): ಸಿಲಿಕಾನ್ ಸಿಟಿ ಬೆಂಗಳೂರು ವರುಣನ ಆರ್ಭಟಕ್ಕೆ ಮುಳುಗಡೆಯಾಗಿದೆ. ಐಟಿ-ಬಿಟಿ ರಾಜಧಾನಿ ಮಳೆ, ನೆರೆಗೆ ನಲುಗಿ ಹೋಗಿದೆ. ಕೊಳೆಗೇರಿಯಿಂದ ಹಿಡಿದು ಗಗನಚುಂಬಿ ಅಪಾರ್ಟ್ ಮೆಂಟ್ ಗಳ ನಿವಾಸಿಗಳವರೆಗೂ ಮಳೆ - ನೆರೆ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿದೆ.
ಇನ್ನೊಂಡೆ 'ಐಟಿ ಸಿಟಿ'ಯಲ್ಲಿನ ಅನೇಕ ಐಟಿ ವೃತ್ತಿಪರರು ತಮ್ಮ ಕೆಲಸದ ಸ್ಥಳಗಳನ್ನು ತಲುಪಲು ಕಾರು, ಬೈಕ್ ಬಿಟ್ಟು ಟ್ರಾಕ್ಟರ್ಗಳನ್ನು ಆಶ್ರಯಿಸುತ್ತಿದ್ದಾರೆ.
ಅಭಿವೃದ್ಧಿಯ ನೈಜತೆಯನ್ನು ಮಳೆಯೂ ಬಟಾಬಯಲು ಮಾಡಿದೆ. ಕೆರೆ, ರಾಜಕಾಲುವೆಗಳ ಒತ್ತುವರಿಯಿಂದ ಉಂಟಾಗುವ ಗಂಭೀರ ಸಮಸ್ಯೆಗಳ ನಿಜರೂಪದ ದರ್ಶನವಾಗಿದೆ.
ಮಳೆಗೆ ಮುಳುಗಿರುವ ರಸ್ತೆಗಳಿಂದ ಓಡಾಡಲಾಗದೇ ಐಟಿ ಕಂಪನಿಗಳ ಅನೇಕ ಉದ್ಯೋಗಿಗಳು ತಮ್ಮ ಕಚೇರಿಗಳನ್ನು ತಲುಪಲು ಟ್ರ್ಯಾಕ್ಟರ್ಗಳ ನೆರವು ಪಡೆದಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಒಟ್ಟಾರೆ ದೇಶದ ಐಟಿ ಹಬ್ ಎನ್ನುವ ಬೆಂಗಳೂರಿನ ವರ್ಚಸ್ಸಿಗೆ ವಿಶ್ವ ಮಟ್ಟದಲ್ಲಿಯೇ ಧಕ್ಕೆ ಉಂಟಾಗಿದೆ.