ಚಿತ್ರದುರ್ಗ, ಸೆ 06 (DaijiworldNews/HR): ಮುರುಘಾ ಮಠದ ವಸತಿನಿಲಯುದಲ್ಲಿನ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 5 ನೇ ಆರೋಪಿ ಚಿತ್ರದುರ್ಗದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
ಲೈಂಗಿಕ ದೌರ್ಜನ್ಯ ನೀಡಿರುವ ಪ್ರಕರಣದಲ್ಲಿ ಈಗಾಗಲೆ ಶಿವಮೂರ್ತಿ ಮುರುಘಾ ಶರಣರು ಹಾಗೂ ಹಾಸ್ಟಲ್ ವಾರ್ಡನ್ ರಶ್ಮಿ ಬಂಧನವಾಗಿದ್ದು, ಇದೀಗ ಪ್ರಕರಣದ 5ನೇ ಆರೋಪಿಯಾಗಿದ್ದ ಮಠದ ವಕೀಲ ಗಂಗಾಧರಯ್ಯ ಮಂಗಳವಾರ ಪೊಲೀಸರಿಗೆ ಶರಣಾಗಿದ್ದಾರೆ.
ಇನ್ನು ಗಂಗಾಧರಯ್ಯನನ್ನು ಚಿತ್ರದುರ್ಗದ ಡಿವೈಎಸ್ ಪಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣದ ಎರಡನೇ ಆರೋಪಿಯಾಗಿರುವ ವಾರ್ಡನ್ ರಶ್ಮಿ ನ್ಯಾಯಾಂಗ ಬಂಧನದಲ್ಲಿದ್ದು, ಶಿವಮೊಗ್ಗ ಕಾರಾಗೃಹಕ್ಕೆ ಕಳಿಹಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಸ್ವಾಮಿಯನ್ನು ಕೋರ್ಟ್ ಸೆಪ್ಟೆಂಬರ್ 14 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.