ಲಕ್ನೋ, ಸೆ 06 (DaijiworldNews/MS): ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಅರವಿಂದ್ ಗಿರಿ ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
65 ವರ್ಷದ ಶಾಸಕ ಅರವಿಂದ್ ಅವರು ಬೆಳಿಗ್ಗೆ ಲಕ್ನೋ ಗೆ ತೆರಳುತ್ತಿದ್ದಾಗ ಸಿಧೌಲಿ (ಸೀತಾಪುರ) ನಲ್ಲಿ ತಮ್ಮ ಕಾರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.ಬಿಜೆಪಿ ಶಾಸಕ ಅರವಿಂದ್ ನಿಧನಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಸಂತಾಪ ಸೂಚಿಸಿದ್ದಾರೆ.
"ಲಖಿಂಪುರ ಖೇರಿ ಜಿಲ್ಲೆಯ ಗೋಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಗಿರಿ ಜಿ ಅವರ ನಿಧನ ದುರದೃಷ್ಟಕರ. ಕುಟುಂಬ ಸದಸ್ಯರಿಗೆ ಈ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ. ಓಂ ಶಾಂತಿ "ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಅರವಿಂದ್ ಗಿರಿ 1993 ರಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿ 2006 ರಲ್ಲಿ ಎಸ್ ಪಿ ಅಭ್ಯರ್ಥಿಯಾಗಿ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು.