ಲಕ್ಷ್ಮಣಪುರಿ, ಸೆ 06 (DaijiworldNews/HR): ಹಜರತಗಂಜದಲ್ಲಿನ ಹೋಟೆಲ್ ಲೆವಾನಾದಲ್ಲಿ ಅಗ್ನಿ ಅವಘಢ ಸಂಭವಿಸಿ 6 ಮಂದಿ ಮೃತಪಟ್ಟು, 10 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಬೆಂಕಿಯಿಂದಾಗಿ ಅಪಾರ ಪ್ರಮಾಣದಲ್ಲಿ ಹೊಗೆ ತುಂಬಿದ್ದರಿಂದ ಕಿಟಕಿಗಳ ಗಾಜನ್ನು ಒಡೆದು ಅನೇಕ ಜನರನ್ನು ಹೊರಗೆ ತೆಗೆಯಲಾಯಿಗಿದ್ದು, ಬೆಂಕಿ ತಗುಲಿರುವುದರ ಮಾಹಿತಿ ದೊರೆಯುತ್ತಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರು ಘಟನಾಸ್ಥಳಕ್ಕೆ ತಲುಪಿ ಕಾರ್ಯಪ್ರವೃತ್ತರಾಗಿದ್ದಾರೆ.
ಇನ್ನು ಹೊಗೆಯಿಂದಾಗಿ ಹೋಟೇಲಿನಲ್ಲಿ ಅನೇಕ ಜನರಿಗೆ ಉಸುರುಗಟ್ಟಿದ್ದು, ಅಗ್ನಿಶಾಮಕದಳದ ಸಿಬ್ಬಂದಿಗಳು ಹರಸಾಹಸ ಮಾಡಿ ಒಳಗಡೆ ಸಿಲುಕಿದ್ದ ಅನೇಕ ಜನರನ್ನು ಹೊರತಂದಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.