ತಿರುವನಂತಪುರಂ ಸೆ 05 (DaijiworldNews/HR): ದೇಶದ ಅತ್ಯಂತ ಕಿರಿಯ ತಿರುವನಂತಪುರಂ ನಗರದ ಆರ್ಯ ರಾಜೇಂದ್ರನ್ ಮತ್ತು ಕೇರಳದ ಅತ್ಯಂತ ಕಿರಿಯ ಸಿಪಿಎಂ ಶಾಸಕ ಕೆ ಎಂ ಸಚಿನ್ದೇವ್ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇತರ ಸಿಪಿಎಂ ನಾಯಕರು ಮತ್ತು ಆರ್ಯ ಮತ್ತು ಸಚಿಂದೇವ್ ಅವರ ನಿಕಟ ಸಂಬಂಧಿಗಳು ಉಪಸ್ಥಿತರಿದ್ದರು.
ಇನ್ನು ರಾಜೇಂದ್ರನ್ ತಿರುವನಂತಪುರಂ ಮೂಲದವರಾಗಿದ್ದು, ಸಚಿನ್ದೇವ್ ಕೋಯಿಕ್ಕೋಡ್ ಮೂಲದವರು. ರಾಜೇಂದ್ರನ್ ಅವರು 2020 ರಲ್ಲಿ 21 ನೇ ವಯಸ್ಸಿನಲ್ಲಿ ಮೇಯರ್ ಆಗುವಾಗ ತಮ್ಮ ಪದವಿ ಕೋರ್ಸ್ ಮಾಡುತ್ತಿದ್ದರು. 28 ರ ಹರೆಯದ ಸಚಿನ್ದೇವ್ ಅವರು ಇಂಗ್ಲಿಷ್ ಸಾಹಿತ್ಯ ಪದವೀಧರರಾಗಿದ್ದಾರೆ.