ಮುಂಬೈ, ಸೆ 05 (DaijiworldNews/HR): ಭಾನುವಾರ ಕಾರು ಅಪಘಾತದಲ್ಲಿ ಮೃತಪಟ್ಟ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಪೊಲೀಸ್ ಮೂಲಗಳ ಪ್ರಕಾರ ಆರಂಭಿಕ ತನಿಖೆಯಿಂದ ತಿಳಿದುಬಂದಿದೆ.
ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ಸೈರಸ್ ಮಿಸ್ತ್ರಿ ಅವರು ಜಹಾಂಗೀರ್ ಪಾಂಡೋಲ್, ಅನಾಹಿತಾ ಪಾಂಡೋಲ್ ಮತ್ತು ಡೇರಿಯಸ್ ಪಾಂಡೋಲ್ ಅವರೊಂದಿಗೆ ಗುಜರಾತ್ನ ಉದ್ವಾಡದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಹಿಂದಿನ ಸೀಟಿನಲ್ಲಿ ಮಿಸ್ತ್ರಿ ಅವರ ಪಕ್ಕದಲ್ಲಿ ಕುಳಿತಿದ್ದ ಜಹಾಂಗೀರ್ ಪಾಂಡೋಲೆ ಸಾವನ್ನಪ್ಪಿದರೆ, ಅನಾಹಿತಾ ಪಾಂಡೋಲೆ ಮತ್ತು ಅವರ ಪತಿ ಡೇರಿಯಸ್ ಪಾಂಡೋಲೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನು ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ಪಾಂಡೋಲೆ ಅವರಿಬ್ಬರೂ ಸೀಟ್ ಬೆಲ್ಟ್ ಧರಿಸದ ಕಾರಣ ಕರ್ಟನ್ ಏರ್ಬ್ಯಾಗ್ಗಳು ತೆರೆಯಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.