ಬಿಹಾರ, ಸೆ 05 (DaijiworldNews/HR): ಗಂಗಾ ನದಿಯಲ್ಲಿ 55 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿರುವ ಘಟನೆ ಬಿಹಾರದ ಪಾಟ್ನಾ ಸಮೀಪವಿರುವ ದಾನಾಪುರದ ಶಾಪುರ್ ಪಿಎಸ್ ಪ್ರದೇಶದ ಬಳಿ ಸಂಭವಿಸಿದ್ದು, ದೋಣಿಯಲ್ಲಿ ಸುಮಾರು 50 ರಿಂದ 54 ಜನರು ಇದ್ದು ಅವರಲ್ಲಿ ಸುಮಾರು 10 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ದೋಣಿಯಲ್ಲಿದ್ದ ಎಲ್ಲಾ ವ್ಯಕ್ತಿಗಳು ಪಾಟ್ನಾದ ದೌದ್ಪುರ ಪ್ರದೇಶದಿಂದ ಬಂದವರಾಗಿದ್ದು, ಅವರೆಲ್ಲರು ಕಾರ್ಮಿಕರಾಗಿದ್ದಾರೆ ಎಂದು ವರದಿಯಾಗಿದೆ.
ಇನ್ನು ರಕ್ಷಣೆಗಾಗಿ ಎರಡು ದೋಣಿಗಳನ್ನು ಕಳುಹಿಸಲಾಗಿದ್ದು, ಘಟನೆಯ ಬಗ್ಗೆ ಎನ್ಡಿಆರ್ಎಫ್ ತಂಡಕ್ಕೆ ಮಾಹಿತಿ ನೀಡಲಾಗಿದೆ ಎಂದು ಎಸ್ಡಿಎಂ ಡಣಾಪುರ ತಿಳಿಸಿದ್ದಾರೆ.