ಹೈದರಾಬಾದ್, ಸೆ 05 (DaijiworldNews/HR): ತೆಲಂಗಾಣದ ಹನುಮಕೊಂಡ ಜಿಲ್ಲೆಯ ಕಾಜಿಪೇಟ್ನಲ್ಲಿ ರೈಲ್ವೆ ಹಳಿ ಬಳಿ ರೀಲ್ಸ್ ಮಾಡಲು ಹೋಗಿ ಯುವಕನಿಗೆ ರೈಲು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ತೆಲಂಗಾಣದ ಅಕ್ಷಯ್ ರಾಜ್ ಎಂಬ ಯುವಕ ತನ್ನ ಸ್ನೇಹಿತನ ಜೊತೆ ರೈಲ್ವೆ ಹಳಿ ಬಂದು ರೀಲ್ಸ್ ಮಾಡಲು ಬಂದಿದ್ದಾನೆ ರೈಲು ಹಳಿ ಬಳಿ ರೈಲು ಬರುತ್ತಿರುವ ವೇಳೆ ಹಳಿಯ ಬದಿಯಲ್ಲಿ ನಡೆದುಕೊಂಡು ಬರುವ ವಿಡಿಯೋ ಮಾಡುತ್ತಿದ್ದ ವೇಳೆ ಯುವಕನ ಭುಜಕ್ಕೆ ರೈಲು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾನೆ.
ಇನ್ನು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದ್ದು, ಯುವಕನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.