ಪುದುಚೇರಿ, ಸೆ 05 (DaijiworldNews/HR): ಪುದುಚೇರಿಯಲ್ಲಿ ಮಹಿಳೆಯೊಬ್ಬಳು ತನ್ನ ಮಗನಿಗೆ ಓದುವುದರಲ್ಲಿ ಕಾಂಪಿಟೇಷನ್ ನೀಡುತ್ತಿದ್ದಾನೆ ಎಂಬ ಕಾರಣಕ್ಕೆ ಸಹಪಾಠಿಗೆ ವಿಷ ನೀಡಿ ಕೊಲೆಗೈದಿರುವ ಘಟನೆ ನಡೆದಿದೆ.
ವಿದ್ಯಾರ್ಥಿ ಬಾಲಾ ಮಣಿಕಂದನ್ ರಜೆಗೆಂದು ಮನೆಗೆ ಹಿಂದುರುಗಿದಾಗ ತೂಕಡಿಸಲು ಆರಂಭಿಸಿದ್ದು, ಈ ವೇಳೆ ಶಾಲೆಯಲ್ಲಿ ಏನಾದರೂ ಸೇವಿಸಿದ್ದೀಯಾ ಎಂದು ತಾಯಿ ಕೇಳಿದಾಗ, ವಾಚ್ಮ್ಯಾನ್ ತನಗೆ ಜ್ಯೂಸ್ ನೀಡಿದ್ದು, ಅದನ್ನು ಕುಡಿದ ನಂತರ ಕುಸಿದು ಬಿದ್ದಿರುವುದಾಗಿ ತಿಳಿಸಿದ್ದು, ಆತನನ್ನು ತಕ್ಷಣವೇ ಮಣಿಕಂದನ್ ಬಾಲಕನನ್ನು ಕಾರೈಕ್ಕಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇನ್ನು ವಾಚ್ಮ್ಯಾನ್ ಏಕೆ ಜ್ಯೂಸ್ ನೀಡಿರಬಹುದು ಎಂದು ಪೋಷಕರು ಮತ್ತು ಆತನ ಸಂಬಂಧಿಕರು ವಿಚಾರಿಸಿದಾಗ ಮಹಿಳೆಯೊಬ್ಬರು ತನ್ನ ಬಳಿಗೆ ಬಂದು ಎರಡು ಜ್ಯೂಸ್ ಬಾಟಲಿಗಳನ್ನು ನೀಡಿ, ಬಾಲಾ ಅವರ ಮನೆಯವರು ಕಳುಹಿಸಿದ್ದಾರೆ ಆತನಿಗೆ ನೀಡುವಂತೆ ಹೇಳಿರುವುದಾಗಿ ವಾಚ್ ಮ್ಯಾನ್ ಹೇಳಿದ್ದಾನೆ.
ಬಾಲಕ ತನ್ನ ಮಗನಿಗೆ ಓದುವುದರಲ್ಲಿ ಕಾಂಪಿಟೇಷನ್ ನೀಡುತ್ತಿದ್ದ ಕಾರಣಕ್ಕೆ ಹೀಗೆ ಮಾಡಿದ್ದಾಳೆ ಎಂದು ತಿಳಿದು ಬಂದಿದ್ದು, ಚಿಕಿತ್ಸೆ ಫಲಾಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.