ತಿರುವನಂತಪುರಂ, ಸೆ 04 (DaijiworldNews/HR): ಕೊರೊನಾ ಮತ್ತು ನಿಫಾ ವೈರಸ್ ತಡೆಗಟ್ಟುವಲ್ಲಿ ನೀಡಿದ ಕೊಡುಗೆಗಾಗಿ ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರಿಗೆ ನೀಡಲಾಗಿದ್ದ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ.
ಕೆ.ಕೆ.ಶೈಲಜಾ ಅವರು ತಮ್ಮ ಪಕ್ಷದೊಂದಿಗೆ ಚರ್ಚೆ ನಡೆಸಿದ ನಂತರ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ.
ಇನ್ನು ಮ್ಯಾಗ್ಸೆಸೆ ಪ್ರಶಸ್ತಿ ಸಮಿತಿಯಿಂದ ನನಗೆ ಪತ್ರ ಬಂದಿದ್ದು, ಸಿಪಿಐಎಂ ಕೇಂದ್ರ ಸಮಿತಿಯ ಸದಸ್ಯನಾಗಿ, ನಾನು ಈ ಬಗ್ಗೆ ನನ್ನ ಪಕ್ಷದೊಂದಿಗೆ ಚರ್ಚಿಸಿದೆ ಮತ್ತು ನಾವು ಒಟ್ಟಾಗಿ ಪ್ರಶಸ್ತಿಯನ್ನು ಸ್ವೀಕರಿಸದಿರಲು ನಿರ್ಧರಿಸಿದ್ದೇವೆ ಎಂದಿದ್ದಾರೆ.