ಬಿಜ್ಪುರ, ಸೆ 04 (DaijiworldNews/HR): ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಉತ್ತರ 24 ಪರಗಣಗಳ ಬಿಜ್ಪುರ ಟಿಎಂಸಿ ಶಾಸಕ ಸುಬೋಧ ಅಧಿಕಾರಿ ಅವರ ಮನೆ ಸೇರಿದಂತೆ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದೆ.
ಸಿಬಿಐ ತಂಡವು ಸುಬೋಧ ಅಧಿಕಾರಿಯ ಸಹೋದರ ಮತ್ತು ಕಾಂಚರಪಾರ ಪುರಸಭೆಯ ಅಧ್ಯಕ್ಷ ಕಮಲ್ ಅಧಿಕಾರಿ ಅವರ ಮನೆಗೆ ಭೇಟಿ ನೀಡಿ ದಾಳಿ ನಡೆಸಿದೆ.
ಇನ್ನು ಚಿಟ್ ಫಂಡ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡ ಮತ್ತು ಹಾಲಿಸಾಹರ್ ಪುರಸಭೆಯ ಅಧ್ಯಕ್ಷ ರಾಜು ಸಹಾನಿ ಅವರನ್ನು ಬಂಧಿಸಿದೆ.