ಉತ್ತರ ಪ್ರದೇಶ, ಸೆ 04 (DaijiworldNews/HR): ಉತ್ತರ ಪ್ರದೇಶದ ಮಣಿಪುರಿಯಲ್ಲಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಹನುಮಂತ ವೇಷಧಾರಿಯೊಬ್ಬರು ಪ್ರದರ್ಶನ ನೀಡುತ್ತಿದ್ದ ವೇದಿಕೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ರವಿ ಶರ್ಮಾ ಎಂದು ಗುರುತಿಸಲಾಗಿದೆ.
ರವಿ ಶರ್ಮಾ ಅವರು ಮಣಿಪುರದ ಕೊತ್ವಾಲಿ ಪ್ರದೇಶದ ಶಿವ ದೇವಾಲಯದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಭಜನಾ ತಂಡದಲ್ಲಿ ಭಾಗವಹಿಸಿದ್ದು, ಅಲ್ಲಿ ಅವರು ಹನುಮಂತನ ವೇಷ ಧರಿಸಿ ನೃತ್ಯ ಮಾಡುತ್ತಿದ್ದರು ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ.
ಇನ್ನು ಕುಸಿದು ಬಿದ್ದಿ ತಕ್ಷಣ ಶರ್ಮಾ ಅವರನ್ನು ಮಣಿಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.