ಜಮ್ಮು, ಸೆ 04 (DaijiworldNews/DB): ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಗಡಿಯೊಳಗೆ ಪ್ರವೇಶಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನನ್ನು ಪಾಕಿಸ್ತಾನ ಸೇನೆ ವಾಪಾಸ್ ಸ್ವದೇಶಕ್ಕೆ ಕಳುಹಿಸಿದೆ.
ಪೂಂಚ್ನ ದೆಗ್ವಾರ್-ಟೆರ್ವಾನ್ ಗ್ರಾಮದ ನಿವಾಸಿ ಮೊಹಮ್ಮದ್ ರಶೀದ್ ( 30) ಎಂಬವರು ತಿಳಿಯದೇ ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ನೊಳಗೆ ಪ್ರವೇಶಿಸಿದ್ದರು. ಆಗಸ್ಟ್ 30ರಿಂದಲೇ ಅವರು ಮನೆಯಿಂದ ನಾಪತ್ತೆಯಾಗಿದ್ದರು. ಇದೀಗ ಪಾಕಿಸ್ತಾನ ಸೇನೆ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿದೆ ಎಂದು ಅಧಿಕಾರಿಗಳು ಇಂದು ತಿಳಿಸಿರುವುದಾಗಿ ವರದಿಯಾಗಿದೆ.
ಪಾಕಿಸ್ತಾನಿ ಸೇನೆಯು ನಾಗರಿಕ ಅಧಿಕಾರಿಗಳು ಮತ್ತು ಪೊಲೀಸರ ಸಮ್ಮುಖದಲ್ಲಿ ರಶೀದ್ನನ್ನು ನಿಯಂತ್ರಣ ರೇಖೆಯ ಚಕನ್ ದಾ ಬಾಗ್ ಕ್ರಾಸಿಂಗ್ ಪಾಯಿಂಟ್ನಲ್ಲಿ ತಮ್ಮ ಭಾರತೀಯ ಸಹವರ್ತಿಗಳಿಗೆ ಹಸ್ತಾಂತರಿಸಿದೆ. ಬಳಿಕ ಅವರನ್ನು ಕುಟುಂಬದವರಿಗೆ ಒಪ್ಪಿಸಲಾಯಿತು ಎಂದು ತಿಳಿದು ಬಂದಿದೆ.