ಜಮ್ಮು-ಕಾಶ್ಮೀರ, ಸೆ 03 (DaijiworldNews/HR): ಭಾರತೀಯ ಸೇನೆಯ ಬಗ್ಗೆ ಸೂಕ್ಷ್ಮ ಮಾಹಿತಿಯನ್ನ ಪಾಕಿಸ್ತಾನಕ್ಕೆ ರವಾನಿಸಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಮುಸ್ಲಿಂ ಮೌಲ್ವಿಯನ್ನ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನ ಅಬ್ದುಲ್ ವಾಹಿದ್( 22 ) ಎಂದು ಗುರುತಿಸಲಾಗಿದ್ದು, ಆತ ಮದರಸಾದಲ್ಲಿ ಶಿಕ್ಷಕನಾಗಿ ಮತ್ತು ಕಿಶ್ತ್ವಾರ್ನ ಮಸೀದಿಯಲ್ಲಿ ಮೌಲ್ವಿ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಇನ್ನು 2020ರ ಡಿಸೆಂಬರ್ನಲ್ಲಿ, ಕಾಶ್ಮೀರ್ ಜನ್ಬಾಜ್ ಫೋರ್ಸ್ ನ 'ಅಮೀರ್' (ಕಮಾಂಡರ್) ಎಂದು ತನ್ನನ್ನು ಪರಿಚಯಿಸಿಕೊಂಡ ತಯ್ಯಬ್ ಫಾರೂಕಿ ಅಲಿಯಾಸ್ 'ಉಮರ್ ಖತಾಬ್' ಎಂಬಾತನನ್ನ ಫೇಸ್ಬುಕ್ನಲ್ಲಿ ಸಂಪರ್ಕಿಸಿದ್ದೇನೆ ಎಂದು ವಾಹಿದ್ ಪೊಲೀಸರ ತನಿಖೆಯ ವೇಳೆ ಬಾಯಿ ಬಿಟ್ಟಿದ್ದಾನೆ.