ಶಿವಮೊಗ್ಗ, ಸೆ 03 (DaijiworldNews/HR): ಸಾವರ್ಕರ್ ಫೋಟೊ ವಿವಾದ ಸಂದರ್ಭ ಯುವಕನಿಗೆ ಚಾಕು ಇರಿದ ಆರೋಪಿಗೆ ಉಗ್ರ ಸಂಘಟನೆಯೊಂದಿಗೆ ನಂಟು ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಆರೋಪಿ ಮಾರ್ನಮಿ ಬೈಲು ನಿವಾಸಿ ಜಬೀವುಲ್ಲಾ ಅಲಿಯಾಸ್ ಚರ್ಬಿ ಉಗ್ರ ಗುಂಪಿನೊಂದಿಗೆ ನಂಟು ಹೊಂದಿರುವ ಹಿನ್ನಲೆಯಲ್ಲಿ ಶೀಘ್ರದಲ್ಲೇ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗುತ್ತದೆ ಎಂದರು.
ಇನ್ನು ಆಗಸ್ಟ್ 15ರಂದು ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ನಲ್ಲಿ ಸಾರ್ವಕರ್ ಫ್ಲೆಕ್ಸ್ ವಿವಾದ ಸಂಬಂಧ ಗಲಾಟೆ ನಡೆದಿದ್ದು, ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿಯಲಾಗಿತ್ತು.