ಚೆನ್ನೈ, ಸೆ 03 (DaijiworldNews/DB): ಕರ್ನಾಟಕ ಸಂಗೀತ ಗಾಯಕ ಟಿ.ವಿ. ಶಂಕರನಾರಾಯಣನ್ (77) ಅವರು ಶುಕ್ರವಾರ ಸಂಜೆ ನಿಧನ ಹೊಂದಿದ್ದಾರೆ.
ವೆಂಬು ಅಯ್ಯರ್ ಪುತ್ರರಾದ ಟಿ.ವಿ. ಶಂಕರನಾರಾಯಣನ್ ಅವರನ್ನು ಮಧುರೈ ಮಣಿ ಅಯ್ಯರ್ ಗಾಯನ ಶೈಲಿಯ ಕೊಂಡಿ ಎಂದೇ ಹೇಳಲಾಗಿತ್ತು. ಮಣಿ ಅಯ್ಯರ್ ಅವರ ಸೋದರ ಸಂಬಂಧಿಯೂ ಆಗಿದ್ದರು. ಕೇಂದ್ರ ಸರಕಾರದಿಂದ 2003ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದ ಟಿ.ವಿ. ಶಂಕರನಾರಾಯಣನ್ ಅವರು, ಅದೇ ವರ್ಷದಲ್ಲಿ ಸಂಗೀತ ಅಕಾಡೆಮಿಯ ಸಂಗೀತ ಕಲಾನಿಧಿ ಪ್ರಶಸ್ತಿಗೆ ಕೂಡಾ ಭಾಜನರಾಗಿದ್ದರು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಸನ್ಮಾನಗಳು ಅವರಿಗೆ ಸಂದಿವೆ.
ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.