ನವದೆಹಲಿ, ಸೆ 03 (DaijiworldNews/HR): ಬಿಹಾರದಲ್ಲಿ ಆರ್ಜೆಡಿ ಮತ್ತು ಜೆಡಿಯು ಮೈತ್ರಿಯನ್ನು ಶೀಘ್ರದಲ್ಲೇ ಬಿಜೆಪಿ ಮುರಿಯಲಿದೆ ಎಂದು ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, 'ಮಣಿಪುರದಲ್ಲಿ ಐವರು ಜೆಡಿಯು ಶಾಸಕರು ಬಿಜೆಪಿ ಸೇರಿದ್ದು, ಇದರೊಂದಿಗೆ ಮಣಿಪುರ ಜೆಡಿಯು ಮುಕ್ತವಾಗಿದೆ ಎಂದಿದ್ದಾರೆ.
ಇನ್ನು ಬಿಹಾರದ ಜೆಡಿಯು ಮತ್ತು ಆರ್ಜೆಡಿ ಮೈತ್ರಿಕೂಟವನ್ನೂ ನಾವು ಶೀಘ್ರದಲ್ಲೇ ಮುರಿಯಲಿದ್ದೇವೆ. ಬಿಹಾರವನ್ನೂ ಜೆಡಿಯು ಮುಕ್ತ ಮಾಡಲಿದ್ದೇವೆ ಎಂದು ಹೇಳಿದ್ದಾರೆ.