ರಾಜ್ಕೋಟ್, ಸೆ 03 (DaijiworldNews/HR): ಬಿಜೆಪಿ ಪಕ್ಷದಲ್ಲಿದ್ದುಕೊಂಡೇ ತಮ್ಮ ಆಮ್ ಆದ್ಮಿ ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಬಿಜೆಪಿ ಕಾರ್ಯಕರತರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಬಿಜೆಪಿಯಿಂದ ಪಾವತಿ ಪಡೆಯುವುದನ್ನು ಮುಂದುವರಿಸಬೇಕು ಆದರೆ ಆಪ್ಗಾಗಿ ಒಳಗಿನಿಂದ ಕೆಲಸ ಮಾಡಬೇಕು ಎಂದಿದ್ದಾರೆ.
ಇನ್ನು ಬಿಜೆಪಿ ಕಾರ್ಯಕರ್ತರು ಪಕ್ಷದಲ್ಲಿ ಉಳಿಯಬಹುದು ಆದರೆ ಎಎಪಿಗಾಗಿ ಕೆಲಸ ಮಾಡಬಹುದು. ಅವರಲ್ಲಿ ಅನೇಕರು ಬಿಜೆಪಿಯಿಂದ ಹಣ ಪಡೆಯುತ್ತಾರೆ, ಆದ್ದರಿಂದ ಅಲ್ಲಿಂದ ಪಾವತಿಯನ್ನು ತೆಗೆದುಕೊಳ್ಳಿ ಆದರೆ ನಮ್ಮ ಬಳಿ ಹಣವಿಲ್ಲದ ಕಾರಣ ನಮಗಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ.