ಕೊಚ್ಚಿ, ಸೆ 03 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರು ನೌಕಾಪಡೆಯ ನೂತನ ಲಾಂಛನ ಮತ್ತು ಧ್ವಜವನ್ನು ಶುಕ್ರವಾರ ಅನಾವರಣಗೊಳಿಸಿದರು.
ನೂತನ ಧ್ವಜದೆದುರು ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಿರುವ ಸಿಬಂದಿ
ಭಾರತದ ಮೊದಲ ಸ್ವದೇಶಿ ನಿರ್ಮಿತ ಯುದ್ದವಿಮಾನ ವಾಹಕ ನೌಕೆ 'ಐಎನ್ಎಸ್ ವಿಕ್ರಾಂತ್'ನ್ನು ಇಲ್ಲಿನ ಹಡಗುಕಟ್ಟೆಯಲ್ಲಿ ನೌಕಾಪಡೆಯ ಸೇವೆಗೆ ನಿಯೋಜನೆಗೊಳಿಸಿದ ಬಳಿಕ ನೂತನ ಲಾಂಛನ ಮತ್ತು ಧ್ವಜ ಅನಾವರಣಗೊಳಿಸಿ ಮಾತನಾಡಿದ ಅವರು, ಈ ಹಿಂದೆ ಇದ್ದ ಲಾಂಛನವು ಜೀತದ ಪ್ರತೀಕದಂತಿತ್ತು. ಅದನ್ನು ಇದೀಗ ಇಳಿಸಲಾಗಿದೆ ಎಂದರು.
ಈ ಹಿಂದೆ ಬಿಳಿ ಧ್ವಜದ ಮೇಲಿನ ಎಡತುದಿಯಲ್ಲಿ ಭಾರತದ ಧ್ವಜವಿತ್ತು. ಇದು ಬ್ರಿಟಿಷ್ ಕ್ರಾಸ್ ಧ್ವಜದ ಮಧ್ಯಭಾಗದಲ್ಲಿತ್ತು. ಕ್ರಾಸ್ನ ಮಧ್ಯಭಾಗದಲ್ಲಿ ರಾಷ್ಟ್ರ ಲಾಂಛನವಿತ್ತು. ನೂತನವಾಗಿ ರೂಪಿಸಲಾದ ಧ್ವಜದಲ್ಲಿ ಕ್ರಾಸ್ನ್ನು ತೆಗೆದು ಹಾಕಲಾಗಿದೆ. ಲಾಂಛನವನ್ನು ಧ್ವಜದ ಬಲಭಾಗದಲ್ಲಿ ವಿನ್ಯಾಸಗೊಳಿಸಲಾಗಿದೆ.