ನವದೆಹಲಿ, ಸೆ 02 (DaijiworldNews/MS): ಸಂಸ್ಕೃತವನ್ನು ಭಾರತದ ರಾಷ್ಟ್ರ ಭಾಷೆಯನ್ನಾಗಿ ಘೋಷಿಸುವಂತೆ ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿದೆ.
ಈ ವಿಷಯವನ್ನು ಪರಿಗಣಿಸಲು ಸರಿಯಾದ ವೇದಿಕೆ ಸಂಸತ್, ನ್ಯಾಯಾಲಯವಲ್ಲ .ನಾವು ಅಭಿಪ್ರಾಯ ಹಂಚಿಕೊಳ್ಳಬಹುದು. ಆದರೆ ಇದನ್ನು ಚರ್ಚಿಸಲು ಸರಿಯಾದ ವೇದಿಕೆ ಸಂಸತ್. ಇದಕ್ಕೆ ಸಂವಿಧಾನದ ತಿದ್ದುಪಡಿ ಅಗತ್ಯವಿದೆ. ಇದು ನೀತಿಯ ವಿಷಯವಾಗಿದ್ದು, ನಾವು ಬದಲಾಯಿಸಲು ಸಾಧ್ಯವಿಲ್ಲ' ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಕೃಷ್ಣ ಮುರಾರಿ ಅವರ ಪೀಠವು ಇದನ್ನು ಪ್ರಚಾರದ ಅರ್ಜಿ ಎಂದು ಕರೆದಿದ್ದು, ಪ್ರಚಾರಕ್ಕಾಗಿ ನಾವು ಏಕೆ ನೋಟಿಸ್ ಗಳನ್ನು ಹೊರಡಿಸಬೇಕು ಅಥವಾ ಘೋಷಣೆಗಳನ್ನು ಮಾಡಬೇಕು ಪ್ರಶ್ನಿಸಿದೆ.
ಈ ವಿಚಾರಕ್ಕಾಗಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಅಗತ್ಯವಿದೆ. ಇದು ನಾವು ಬದಲಾಯಿಸಲು ಸಾಧ್ಯವಿಲ್ಲದ ವಿಚಾರವಾಗಿದೆ. ಹೀಗಾಗಿ ನಾವು ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸುತ್ತೇವೆ ಎಂದು ಸುಪ್ರೀಂ ಪೀಠ ಹೇಳಿದೆ.