ನವದೆಹಲಿ, ಸೆ 02 (DaijiworldNews/DB): ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ನ ಯಶಸ್ಸು ಎಲ್ಲಾ ಸರ್ಕಾರಗಳಿಗೂ ಸಲ್ಲಬೇಕು. ಆದರೆ ಪ್ರಧಾನಿ ನರೇಂದ್ರ ಮೋದಿ ಇದನ್ನು ಒಪ್ಪಿಕೊಳ್ಳಬಲ್ಲರೇ? ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 1999ರಿಂದೀಚೆಗೆ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳ ಸಾಮೂಹಿಕ ನಾಯಕತ್ವದ ಪ್ರಯತ್ನದ ಫಲವಾಗಿ ಐಎನ್ಎಸ್ ವಿಕ್ರಾಂತ್ ಇಂದು ಲೋಕಾರ್ಪಣೆಯಾಗಿದೆ ಎಂದರು.
1971ರ ಯುದ್ಧದಲ್ಲಿ ದೇಶದ ಮೊದಲ ಐಎನ್ಎಸ್ ವಿಕ್ರಾಂತ್ ನಮ್ಮ ದೇಶಕ್ಕಾಗಿ ಉತ್ತಮ ಸೇವೆ ಸಲ್ಲಿಸಿತ್ತು. ಅದನ್ನೂ ನಾವಿಲ್ಲಿ ನೆನಪಿಸಿಕೊಳ್ಳಬೇಕು. ಇದನ್ನು ಇಂಗ್ಲೆಂಡ್ನಿಂದ ಪಡೆಯಲು ಕೃಷ್ಣ ಮೆನನ್ ಅತಿ ಹೆಚ್ಚು ನಿಂದಿಸಲ್ಪಟ್ಟಿದ್ದರು. ಅವರ ಪಾತ್ರ ಇಲ್ಲಿ ಅತಿ ಪ್ರಮುಖವಾಗಿದೆ ಎಂದು ಇದೇ ವೇಳೆ ಅವರು ಬರೆದುಕೊಂಡಿದ್ದಾರೆ.