ಪಾಟ್ನಾ, ಸೆ 02 (DaijiworldNews/DB): ನಾನು ಸಾರ್ವಜನಿಕ ಸೇವೆಯಲ್ಲಿ ಕಳೆದ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದೇನೆ. ಕೇಂದ್ರದಲ್ಲಿ ಯಾರೋ ಏನೋ ಹೇಳಿದ್ದಾರೆಂದು ನಾನು ಗಮನಿಸುವುದಕ್ಕೆ ಹೋಗುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಹೇಳಿದ್ದಾರೆ.
ಭ್ರಷ್ಟರ ವಿರುದ್ದ ಕ್ರಮ ರಾಜಕೀಯದಲ್ಲಿ ಹೊಸ ಧ್ರುವೀಕರಣಕ್ಕೆ ಕಾರಣವಾಗುತ್ತಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಭ್ರಷ್ಟರನ್ನು ರಕ್ಷಣೆ ಮಾಡುವ ಕೆಲಸವನ್ನು ಯಾರೂ ಮಾಡುವುದಿಲ್ಲ, ಮಾಡುತ್ತಿಲ್ಲ. ಇದರ ಹೊರತಾಗಿ ಕೇಂದ್ರದಲ್ಲಿ ಯಾರೋ ಏನೋ ಹೇಳುತ್ತಾರೆಂದು ನಾನು ಗಮನಿಸುವುದಕ್ಕೆ ಹೋಗುವುದಿಲ್ಲ ಎಂದರು.
ಬೇರೆ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ಅವರು ಸ್ಪಲ್ಪ ಗಮನ ಹರಿಸಲಿ. ಆನಂತರ ಉಳಿದವರ ಬಗ್ಗೆ ಮಾತನಾಡಲಿ ಎಂದು ಇದೇ ವೇಳೆ ತಿಳಿಸಿದರು.