ನವದೆಹಲಿ, ಅ 02 (DaijiworldNews/HR): ವಿಶ್ವದ ಅತಿ ದೊಡ್ಡ ಕಾಫಿ ಉತ್ಪನ್ನ ಕಂಪನಿ ಸ್ಟಾರ್ಬಕ್ಸ್ಗೆ ಭಾರತ ಮೂಲದ ಲಕ್ಷ್ಮಣ್ ನರಸಿಂಹನ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ.
ಈ ಹಿಂದೆ ರೆಕಿಟ್ ಕಂಪನಿಯ ಸಿಇಒ ಲಕ್ಷ್ಮಣ್ ನರಸಿಂಹನ್ ಅವರು ಆಗಿದ್ದು, ಪೆಪ್ಸಿಕೊವಿನ ಜಾಗತಿಕ ಮುಖ್ಯ ವಾಣಿಜ್ಯ ಅಧಿಕಾರಿಯಾಗಿಯೂ ಕೂಡ ಇವರು ಕಾರ್ಯ ನಿರ್ವಹಿಸಿದ್ದರು.
ಇನ್ನು ಅಕ್ಟೋಬರ್ 1 ರಂದು ಲಕ್ಷ್ಮಣ್ ನರಸಿಂಹನ್ ಕಂಪನಿಗೆ ಸೇರಲಿದ್ದು, 2023ರ ಏಪ್ರಿಲ್ನಲ್ಲಿ ಅಧಿಕಾರ ವಹಿಸಲಿದ್ದಾರೆ.