ಉತ್ತರ ಪ್ರದೇಶ, ಅ 02 (DaijiworldNews/HR): ಗಂಗಾ ನದಿಯಲ್ಲಿ ಜನರನ್ನು ಸಾಗಿಸುತ್ತಿದ್ದ ದೋಣಿಯೊಂದು ಮುಳುಗಡೆಯಾಗಿ ಐದು ಮಕ್ಕಳು ಸೇರಿ ಶವಗಳನ್ನು 7 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಸಂಧ್ಯಾ ಕುಮಾರ್ (6), ಅನಿತಾ ಪಾಸ್ವಾನ್ (10), ಅಲಿಸಾ ಯಾದವ್ (5), ಖುಶಾಲ್ ಯಾದವ್ (10) ಮತ್ತು ಸತ್ಯಂ (12) ಎಂದು ಗುರುತಿಸಲಾಗಿದ್ದು, ಸ್ಥಳೀಯರ ಸಹಾಯದಿಂದ ಕೆಲವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ.
24 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯು ಮುಳುಗಡೇಯಾಗಿದ್ದು, ಜನರು ವಾರದ ಮಾರುಕಟ್ಟೆಯಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.