ರಾಂಚಿ, ಸೆ 01 (DaijiworldNews/SM): ಜಾರ್ಖಂಡ್ನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಯುಪಿಎ ಮೈತ್ರಿಕೂಟ ಶಾಸಕರನ್ನು ಛತ್ತೀಸ್ಗಡ ರೆಸಾರ್ಟ್ ಗೆ ರವಾನಿಸಲಾಗಿದೆ.
ಶಾಸಕರ ಕುದುರೆ ವ್ಯಾಪಾರದ ಭೀತಿ ಹಿನ್ನಲೆಯಲ್ಲಿ ಜೆಎಂಎಂ ಮತ್ತು ಕಾಂಗ್ರೆಸ್ ಮೈತ್ರಿಕೂಟ ಯುಪಿಎ ಶಾಸಕರನ್ನು ರೆಸಾರ್ಟ್ ಗೆ ರವಾನಿಸಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ನಿವಾಸದಿಂದ ಎರಡು ಖಾಸಗಿ ಬಸ್ಸುಗಳಲ್ಲಿ ಶಾಸಕರು ರಾಂಚಿ ವಿಮಾನ ನಿಲ್ದಾಣದತ್ತ ಪ್ರಯಾಣಿಸಿದ್ದಾರೆ. ಅಲ್ಲಿಂದ ಅವರಿಗೆ ರಾಯ್ಪುರಕ್ಕೆ ವಿಮಾನ ಕಾಯ್ದಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೊರೇನ್ ಸಹ ಬಸ್ಸೊಂದರಲ್ಲಿ ಕಾಣಿಸಿಕೊಂಡಿದ್ದು, ಅವರೂ ಸಹ ಶಾಸಕರೊಂದಿಗೆ ಇರಲಿದ್ದಾರೆ ಎನ್ನಲಾಗಿದೆ.
32 ಶಾಸಕರು ಸೇರಿದಂತೆ ಒಟ್ಟು 41 ಜನರು ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣಕ್ಕೆ ಬಂದಿಳಿದರು ಮತ್ತು ಮೂರು ಬಸ್ಗಳಲ್ಲಿ ಅವರನ್ನು ವಿಮಾನ ನಿಲ್ದಾಣದಿಂದ ನವ ರಾಯಪುರದ ಮೇಫೇರ್ ರೆಸಾರ್ಟ್ಗೆ ಕರೆದೊಯ್ಯಲಾಯಿತು ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಛತ್ತೀಸ್ಗಡದ ರಾಯ್ಪುರದಲ್ಲಿರುವ ರೆಸಾರ್ಟೊಂದಕ್ಕೆ ಶಾಸಕರನ್ನು ಕರೆದೊಯ್ಯುವ ನಿರೀಕ್ಷೆ ಇದ್ದು, ಮಹಾರಾಷ್ಟ್ರ ಮಾದರಿಯಲ್ಲಿ ಸೊರೇನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಹಾಗೂ ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸಿದೆ ಎಂಬ ಆರೋಪಗಳು ಕೇಳಿಬಂದಿವೆ.