ತಮಿಳುನಾಡು,ಸೆ 01 (DaijiworldNews/MS): ಕಿಕ್ಕಿರಿದು ತುಂಬಿದ್ದ ಚಲಿಸುತ್ತಿದ್ದ ಬಸ್ನಿಂದ ಶಾಲಾ ವಿದ್ಯಾರ್ಥಿಯೊಬ್ಬರು ಹಿಡಿತ ತಪ್ಪಿ ಬೀಳುತ್ತಿರುವ ಭಯಾನಕ ವಿಡಿಯೋವೊಂದು ವೈರಲ್ ಆಗಿದೆ.
ಟ್ವಿಟರ್ ಪೋಸ್ಟ್ ಪ್ರಕಾರ, ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ .ಟ್ವಿಟರ್ ಬಳಕೆದಾರರಾದ ಎ ಸೆಂಥಿಲ್ ಕುಮಾರ್ ಅವರು ಮೂಲತಃ ಹಂಚಿಕೊಂಡಿರುವ ಸಣ್ಣ ವಿಡಿಯೋ ಕ್ಲಿಪ್ ನಲ್ಲಿ , ಬಸ್ಸಿನ ಸಾಮರ್ಥ್ಯಕ್ಕಿಂತ ಅತಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡಿದ್ದು, ಜನ ಬಾಗಿಲಿನಲ್ಲಿ ನೇತಾಡುತ್ತಿರುವ ಕಾರಣ ಬಸ್ ಎಡಕ್ಕೆ ವಾಲಿರುವುದನ್ನು ತೋರಿಸಿದೆ. ಈ ವೇಳೆ ಚಲಿಸುತ್ತಿದ್ದ ಬಸ್ಸಿನಿಂದ, ಶಾಲಾ ಸಮವಸ್ತ್ರವನ್ನು ಧರಿಸಿದ್ದ ಹುಡುಗ ರಸ್ತೆಯ ಮೇಲೆ ಜಾರಿಬಿದ್ದಿದ್ದಾನೆ.
ಈ ವೇಳೆ ಹಿಂದಿನಿಂದ ಬರುತ್ತಿದ್ದ ವಾಹನ ವಾಹನ ವೇಗ ಕಡಿಮೆ ಇದ್ದುದರಿಂದ ಬಾಲಕನ ಮೇಲೆ ಹರಿಯುವುದು ತಪ್ಪಿದೆ. ನೆಲಕ್ಕೆ ಬಿದ್ದ ವಿದ್ಯಾರ್ಥಿ ನಿಲ್ಲಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
ಈ ವೀಡಿಯೊ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಣಿಸಿಕೊಂಡಿದೆ. ಟ್ವಿಟರ್ ನಲ್ಲಿ, ಇದು 4,88,000 ವೀಕ್ಷಣೆಗಳನ್ನು ಗಳಿಸಿದೆ.
"ಓ ದೇವರೇ!! ಇದು ನಮ್ಮ ಶಾಲಾ ದಿನಗಳ ಭಯಾನಕ ನೆನಪುಗಳನ್ನು ತಂದಿದೆ. 3-4 ದಶಕಗಳ ನಂತರವೂ ಇಂತಹ ವಿಚಾರ ಮುಂದುವರಿಯುತ್ತಿರುವುದನ್ನು ನೋಡಲು ಭಯಾನಕವಾಗಿದೆ!" ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.
"ಬಾಲಕ ಅದೃಷ್ಟಶಾಲಿಯಾಗಿದ್ದಾನೆ, ಅವನು ಚಕ್ರದ ಕೆಳಗೆ ಬೀಳಲಿಲ್ಲ." ಎಂದರೆ ಮತ್ತೊಬ್ಬ ನೆಟ್ಟಿಗರು
"ಸುರಕ್ಷಿತ ಸವಾರಿ ಎಂದರೆ ಮಕ್ಕಳು ಬಸ್ಸಿನೊಳಗೆ ಇರಬೇಕು. ಒಂದು ಕೈಯಿಂದ ನೇತಾಡುವ ಮತ್ತು ಭಾರದ ಶಾಲಾ ಬ್ಯಾಗ್ ವನ್ನು ಹೊತ್ತುಕೊಂಡು ಬಸ್ಸಿ ಮೆಟ್ಟಿಲುಗಳ ಮೇಲೆ ಸವಾರಿ ಮಾಡಬಾರದು" . "ನಾವು ನಮ್ಮ ಮಕ್ಕಳಿಗೆ ಶಾಲೆಗೆ ಸುರಕ್ಷಿತ ಪ್ರಯಾಣ ಕಲ್ಪಿಸಲು ಅಸಾಧ್ಯವಾಗಿದ್ದರೆ , ನಾವು ಹೊಂದಿರುವ ಅಭಿವೃದ್ಧಿಯ ಅರ್ಥವೇನು" ಎಂದು ನಾಲ್ಕನೆಯವರು ಪ್ರತಿಕ್ರಿಯಿಸಿದ್ದಾರೆ
ತೂಕದ ಕಾರಣ ವಾಲಿಕೊಂಡಿರುವಂತಹ ಬಸ್ಸಿನ ಬಾಗಿಲಿನಲ್ಲಿ ನೇತಾಡುತ್ತಿರುವ ಕಾರಣ ಬಸ್ ಎಡಕ್ಕೆ ವಾಲಿರುವುದನ್ನು ತೋರಿಸಿದೆ. ಸ್ವಲ್ಪ ಸಮಯದ ನಂತರ, ಶಾಲಾ ಸಮವಸ್ತ್ರವನ್ನು ಧರಿಸಿದ್ದ ಹುಡುಗ ರಸ್ತೆಯ ಮೇಲೆ ಜಾರಿಬೀಳುವುದನ್ನು ತೋರಿಸಿದೆ.
ಅವರು ವಾಹನದ ಹಿಂದಿನ ಚಕ್ರಗಳಿಂದ ಮತ್ತು ಒಳಬರುವ ಟ್ರಾಫಿಕ್ಗೆ ಕೇವಲ ಇಂಚುಗಳಷ್ಟು ದೂರದಲ್ಲಿ ಉರುಳುತ್ತಿರುವುದು ಕಂಡುಬಂದಿದೆ.