ನವದೆಹಲಿ, ಸೆ 01 (DaijiworldNews/MS): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ 58 ಮತ ಗಳಿಸುವ ಮೂಲಕ ಗೆದ್ದು ಬೀಗಿದ್ದಾರೆ.
ಎಪ್ಪತ್ತು ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 62 ಸ್ಥಾನಗಳನ್ನು ಗಳಿಸಿದ್ದು ಈ ಪೈಕಿ 58 ಮತಗಳು ಅವರಿಗೆ ಲಭಿಸಿವೆ.
62 ಎಎಪಿ ಶಾಸಕರ ಪೈಕಿ 59 ಮಂದಿ ವಿಶ್ವಾಸಮತಕ್ಕೆ ಹಾಜರಾಗಿದ್ದರು. ಗೈರುಹಾಜರಾದ ಮೂವರಲ್ಲಿ ಇಬ್ಬರು ವಿದೇಶದಲ್ಲಿದ್ದು, ಮೂರನೇ ವ್ಯಕ್ತಿ ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದಾರೆ. ಒಟ್ಟಾರೆಯಾಗಿ, 58 ಶಾಸಕರು ವಿಶ್ವಾಸ ಮತದ ಪರವಾಗಿ ಮತ ಹಾಕಿದ್ದಾರೆ. ಮತ್ತೊಬ್ಬರು ಸ್ಪೀಕರ್ ಹಾಕಿದ್ದಾರೆ.
ಇದೇ ವೇಳೆ ಮಾತನಾಡಿದ ಸಿಎಂ, ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿ, " ಮನೀಷ್ ಸಿಸೋಡಿಯಾ ಮೇಲಿನ ದಾಳಿಯ ನಂತರ ಗುಜರಾತ್ನಲ್ಲಿ ಎಎಪಿಯ ಮತ ಹಂಚಿಕೆಯು ಶೇಕಡಾ 4 ರಷ್ಟು ಹೆಚ್ಚಾಗಿದೆ. ಅವರನ್ನು ಬಂಧಿಸಿದಾಗ ಅದು ಶೇಕಡಾ 6 ಕ್ಕೆ ಹೆಚ್ಚಾಗುತ್ತದೆ ಎಂದು ಹೇಳಿದರು.
ತಮ್ಮ ಪಕ್ಷದ ಸದಸ್ಯರನ್ನು ಖರೀದಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಈ ಹಿಂದೆ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದು, ಹೀಗಾಗಿ ವಿಶ್ವಾಸಮತ ಯಾಚನೆಗೆ ಮುಂದಾಗಿದ್ದರು.