ಬಿಹಾರ, ಸೆ 01 (DaijiworldNews/MS): ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ, ಕಾನೂನು ಖಾತೆಯಿಂದ, ಕಬ್ಬು ಉದ್ಯಮ ಸಚಿವರಾಗಿ ಬದಲಾದ ಕೆಲವೇ ಗಂಟೆಗಳ ನಂತರ, ಅಪಹರಣ ಪ್ರಕರಣದ ಆರೋಪಿ ಬಿಹಾರದ ಸಚಿವ ಕಾರ್ತಿಕ್ ಕುಮಾರ್ ಅವರು ಬುಧವಾರ ತಡರಾತ್ರಿ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ತಮ್ಮ ಸ್ಥಾನಕ್ಕೆ ’ರಾಜೀನಾಮೆ ’ ನೀಡಿದ್ದಾರೆ ಎಂದು ಸಿಎಂ ಕಚೇರಿಯ ಹೇಳಿಕೆ ತಿಳಿಸಿದೆ.
ಬಿಹಾರದ ಸಚಿವ ಕಾರ್ತಿಕ್ ಕುಮಾರ್ ಅವರು 2014ರ ಅಪಹರಣ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದು ವಿರೋಧ ಪಕ್ಷಗಳ ತೀವ್ರ ಒತ್ತಡದ ರಾಜೀನಾಮೆ ಸಲ್ಲಿಸಿದ್ದು , ಸಚಿವರ ರಾಜೀನಾಮೆ ಪತ್ರವನ್ನು ಬಿಹಾರ ರಾಜ್ಯಪಾಲರು ಅಂಗೀಕರಿಸಿದ್ದಾರೆ.
ರಾಜೀವ್ ರಂಜನ್ ಸಿಂಗ್ ಅಲಿಯಾಸ್ ರಾಜು ಸಿಂಗ್ ಎಂಬವರ ಅಪಹರಣದಲ್ಲಿ ಕಾರ್ತಿಕ್ ಕುಮಾರ್ ಅವರ ಪಾತ್ರವಿದೆ ಎಂದು ಆರೋಪಿಸಿ ಜುಲೈ 19 ರಂದು ಕುಮಾರ್ ವಿರುದ್ಧ ವಾರಂಟ್ ಹೊರಡಿಸಿದ್ದರೂ ಅವರು ನ್ಯಾಯಾಲಯಕ್ಕೆ ಶರಣಾಗಿರಲಿಲ್ಲ. ನ್ಯಾಯಾಲಯದ ಆದೇಶವನ್ನು ಅನುಸರಿಸದ ಕಾರ್ತಿಕ್ ಕುಮಾರ್ ಆಗಸ್ಟ್ 16 ರಂದು ಕುಮಾರ್ ಅಧಿಕಾರ ವಹಿಸಿಕೊಂಡಿದ್ದರು.
ಇನ್ನೊಂದೆಡೆ ಕಂದಾಯ ಸಚಿವ ಅಲೋಕ್ ಕುಮಾರ್ ಮೆಹ್ತಾ ಅವರಿಗೆ ಕಬ್ಬು ಉದ್ಯಮ ಸಚಿವಾಲಯದ ಹೆಚ್ಚುವರಿ ಹೊಣೆ ವಹಿಸಲಾಗಿದೆ.