ಪಶ್ಚಿಮ ಬಂಗಾಳ, ಆ 31 (DaijiworldNews/DB): ಯುವಕನೊಬ್ಬ ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಿಂದ ತೀವ್ರ ರಕ್ತಸ್ರಾವವಾಗಿ ಹಸು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಪ್ರದ್ಯುತ್ ಭೂಯಿ ಎಂಬ 29 ವರ್ಷದ ಯುವಕ ನೆರೆಮನೆಯ ಆರ್ತಿ ಭೂಯಿ ಎಂಬವರ ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ ಎಸಗಿದ್ದಾತ. ಉತ್ತರ ಚಂದನ್ಪಿಡಿ ಏರಿಯಾದ ನಮ್ಕಾನಾ ಬ್ಲಾಕ್ನಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಧ್ಯರಾತ್ರಿ ಹಸುಗಳನ್ನು ಕಟ್ಟಿ ಹಾಕಿದ ಸ್ಥಳಕ್ಕೆ ತೆರಳಿ ಕೃತ್ಯ ಎಸಗಿದ್ದಾನೆ. ಗರ್ಭಿಣಿ ಹಸುವಾದ್ದರಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿ ಹಸು ಮೃತಪಟ್ಟಿದೆ. ಈತ ಈ ಹಿಂದೆಯೂ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.