ಉತ್ತರ ಪ್ರದೇಶ, ಆ 31 (DijiworldNews/HR): ರೈಲ್ವೆ ಗೇಟ್ ಮುಚ್ಚಿದ ನಂತರ ವ್ಯಕ್ತಿಯೊಬ್ಬ ರೈಲ್ವೆ ಟ್ರ್ಯಾಕ್ ದಾಟಲು ಯತ್ನಿಸಿದ್ದು, ಈ ವೇಳೆ ಮತ್ತೊಂದು ಟ್ರ್ಯಾಕ್ ನಲ್ಲಿ ರೈಲು ಬಂದು ವ್ಯಕ್ತಿ ಕೂದಲೆಳೆ ಅಂತರದಲ್ಲಿ ಪಾರಾಗಿರುವ ವಿಡಿಯೋ ವೈರಲ್ ಆಗಿದೆ.
ಒಂದು ಟ್ರ್ಯಾಕ್ ನಲ್ಲಿ ರೈಲು ಹಾದು ಹೋಗುತ್ತಿದ್ದು, ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ತನ್ನ ಬೈಕ್ನೊಂದಿಗೆ ರೈಲ್ವೆ ಕ್ರಾಸಿಂಗ್ ಅನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಅಲ್ಲಿಂದ ಇನ್ನೊಂದು ಹಳಿಯಲ್ಲಿ ರೈಲು ಬರುವುದನ್ನು ವ್ಯಕ್ತಿ ಗಮನಿಸುತ್ತಾನೆ. ತಕ್ಷಣ ಹಿಂದೆ ಸರಿಯಲು ಯತ್ನಿಸಿದಾಗ ವ್ಯಕ್ತಿಯ ಬೈಕ್ ಹಳಿಗಳ ನಡುವೆ ಸಿಲುಕಿಕೊಳ್ಳುತ್ತದೆ. ಅದನ್ನು ಹೊರತರಲು ಪ್ರಯತ್ನಿಸುತ್ತಿರುವಾಗ, ಹಳಿಯಲ್ಲಿ ವೇಗವಾಗಿ ಬರುತ್ತಿರುವ ರೈಲನ್ನು ನೋಡಿ ಆ ವ್ಯಕ್ತಿ ಬೈಕ್ ಅನ್ನು ಅಲ್ಲೇ ಬಿಟ್ಟು ಅಲ್ಲಿಂದ ತೆರಳಿ ಪ್ರಾಣ ಉಳಿಸಿಕೊಂಡಿದ್ದಾರೆ.
ಇನ್ನು ರೈಲು ಬೈಕ್ ಮೇಲೆಯೇ ಹಾದು ಹೋಗುತ್ತದೆ. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ, ಆದರೆ ಭಾರೀ ಅನಾಹುತ ತಪ್ಪಿದೆ.