ನವದೆಹಲಿ, ಆ 31 (DijiworldNews/HR): ಪಂಜಾಬ್ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಮತ್ತು ಇಬ್ಬರು ಕ್ಯಾಬಿನೆಟ್ ಸಚಿವರಾದ ಗುರ್ಮೀತ್ ಸಿಂಗ್ ಮೀಟ್ ಹಯರ್ ಮತ್ತು ಲಾಲ್ಜಿತ್ ಸಿಂಗ್ ಭುಲ್ಲರ್ ಸೇರಿದಂತೆ ಒಂಬತ್ತು ಜನರ ವಿರುದ್ಧ ಪಂಜಾಬ್ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಪಂಜಾಬ್ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್
ಅಮೃತಸರ ಮತ್ತು ತರ್ನ್ ತರಣ್ನಲ್ಲಿ ನಡೆದ ಹೂಚ್ ಸಾವುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ 2020 ರ ಆಗಸ್ಟ್ ನಲ್ಲಿ ಧರಣಿ ನಡೆಸಿದಕ್ಕಾಗಿ ಅವರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕರು ಮತ್ತು ಕಾರ್ಯಕರ್ತರು ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ.
ಇನ್ನು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ಪಂಜಾಬ್ ಸ್ಪೀಕರ್, ಇಬ್ಬರು ಸಚಿವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ.