ಉತ್ತರಾಖಂಡ್, ಆ 30 (DaijiworldNews/HR): ಸಿಲಿಂಡರ್ನಿಂದ ಅನಿಲ ಸೋರಿಕೆಯಾದ ಪರಿಣಾಮವಾಗಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ರುದ್ರಾಪುರದ ಆಜಾದ್ ನಗರ ಟ್ರಾನ್ಸಿಟ್ ಕ್ಯಾಂಪ್ನಲ್ಲಿ ಸೋರಿಕೆಯು 40-50 ಲೀಟರ್ ಸಾಮರ್ಥ್ಯದ ಸಿಲಿಂಡರ್ಗೆ ಜೋಡಿಸಲಾದ ಮುರಿದ ಪೈಪ್ನಿಂದ ಸೋರಿಕೆ ಸಂಭವಿಸಿದೆ ಎನ್ನಲಾಗಿದೆ.
ಇನ್ನು ದುರಂತವನ್ನ ತಡೆಗಟ್ಟಲು, ರಾಜ್ಯ ವಿಪತ್ತು ಸ್ಪಂದನಾ ಪಡೆ ಕಾರ್ಯಕರ್ತರು ಸಿಲಿಂಡರ್ʼನ್ನ ತಕ್ಷಣವೇ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿದರು ಮತ್ತು ಉಸಿರಾಟದ ತೊಂದರೆಯ ಬಗ್ಗೆ ದೂರು ನೀಡಿದವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.