ನವದೆಹಲಿ, ಆ 30 (DaijiworldNews/DB): ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರಿಗೆ ಸಂಬಂಧಿಸಿದ ಘಾಜಿಯಾಬಾದ್ನಲ್ಲಿರುವ ಲಾಕರ್ನ್ನು ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಘಾಜಿಯಾಬಾದ್ನಲ್ಲಿನ ಸೆಕ್ಟರ್ 4 ವಸುಂಧರದಲ್ಲಿರುವ ಪಿಎನ್ಬಿ ಶಾಖೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಶಾಖೆಯ ಬಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸಿಸೋಡಿಯಾ ಅವರ ಪತ್ನಿಯೂ ಈ ವೇಳೆ ಸ್ಥಳದಲ್ಲಿದ್ದರು.
ಸಿಬಿಐ ಬ್ಯಾಂಕ್ ಲಾಕರ್ ಪರಿಶೀಲನೆಗೆ ಬರುತ್ತಿರುವುದನ್ನು ಮುನ್ನಾದಿನವೇ ಟ್ವೀಟ್ ಮುಖಾಂತರ ತಿಳಿಸಿದ್ದ ಮನೀಶ್ ಸಿಸೋಡಿಯಾ, ಆಗಸ್ಟ್ 19ರಂದು ನನ್ನ ನಿವಾಸದ ಮೇಲೆ ನಡೆಸಿದ ದಾಳಿಯಲ್ಲಿ ಸಿಬಿಐ ಅಧಿಕಾರಿಗಳಿಗೆ ಏನೂ ಸಿಕ್ಕಿರಲಿಲ್ಲ. ಈಗ ಲಾಕರ್ ಪರಿಶೀಲನೆಗೆ ಬರುತ್ತಿದ್ದಾರೆ. ಅಲ್ಲಿಯೂ ಅವರಿಗೆ ಏನೂ ಸಿಗದು. ಹೀಗಾಗಿ ಸಿಬಿಐಗೆ ಸ್ವಾಗತ ಎಂದು ಬರೆದುಕೊಂಡಿದ್ದರು.
ದೆಹಲಿಯ ಹೊಸ ಮದ್ಯ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿದಂತೆ15 ಮಂದಿ ವಿರುದ್ಧ ಎಫ್ಐಆರ್ ದಾಖಲಾಲಿಸಲಾಗಿತ್ತು.