ಮಸ್ಕಿ, ಆ 30 (DaijiworldNews/MS): ಮಸ್ಕಿ ಪಟ್ಟಣ ಸಮೀಪ ತುಂಗಾಭದ್ರಾ ಎಡದಂಡೆ ಕಾಲುವೆಗೆ (ಟಿಎಲ್ ಸಿ) ಟಾಟಾ ಇಂಡಿಗೋ ಕಾರು ಮಂಗಳವಾರ ಉರುಳಿಬಿದ್ದು ಇಬ್ಬರು ಜಲಸಮಾಧಿಯಾಗಿದ್ದಾರೆ.
ಕಾರಿನಲ್ಲಿದ್ದವರು ಅಮರೇಶ್ವರ ಹತ್ತಿರದ ಗೋನವಾಟ್ಲ ಗ್ರಾಮದಿಂದ ಸಿಂಧನೂರು ಕಡೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಆತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಕಾರು ಹೈದರಬಾದ್ ನ ನೆಕ್ಕಂಟಿ ಶ್ರೀನಿವಾಸ್ ಎಂಬುವರಿಗೆ ಸೇರಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಾರು ಹಾಗೂ ದೇಹಗಳನ್ನು ಹೊರಗೆ ತೆಗೆದು ತನಿಖೆ ಮುಂದುವರಿಸಿದ್ದಾರೆ.