ಆಗ್ರಾ, ಆ 30 (DaijiworldNews/HR): ಕೃಷ್ಣನ ವಿಗ್ರಹದೊಂದಿಗೆ ರಾಜಸ್ಥಾನದ ಜೈಪುರದ ಪ್ರವಾಸಿ ಯುವಕನೊಬ್ಬ ತಾಜ್ ಮಹಲ್ ಪ್ರವೇಶಿಸುವುದನ್ನು ಸಿಬ್ಬಂದಿ ತಡೆದು ನಿಲಿಸಿ ವಾಪಸ್ ಕಳಿಸಿದ ಘಟನೆ ನಡೆದಿದೆ.
ಪ್ರವಾಸಿ ಗೌತಮ್ ತಾಜ್ ಮಹಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕೃಷ್ಣನ ಮೂರ್ತಿಯೊಂದಿಗೆ ಮಥುರಾ ಮತ್ತು ವೃಂದಾವನಕ್ಕೆ ಭೇಟಿ ನೀಡಿದ್ದೇನೆ. ಆದರೆ ಇಲ್ಲಿ ಅವರು ವಿಗ್ರಹವಿಲ್ಲದೆಯೇ ಪ್ರವೇಶಿಸಲು ಹೇಳಿದರು ಎಂದರು.
ಇನ್ನು ತಾಜ್ ಸಂರಕ್ಷಣಾ ಸಹಾಯಕಪ್ರಿನ್ಸ್ ವಾಜಪೇಯಿ ಮಾತನಾಡಿ ನನಗೂ ಈ ಬಗ್ಗೆ ವೀಡಿಯೊ ಸಿಕ್ಕಿದ್ದು, ಘಟನೆ ಯಾವಾಗ ನಡೆಯಿತುಬ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ರಾಷ್ಟ್ರೀಯ ಹಿಂದೂ ಪರಿಷತ್ ಭಾರತ್ ರಾಷ್ಟ್ರೀಯ ಅಧ್ಯಕ್ಷ ಗೋವಿಂದ ಪರಾಶರ ಮಾತನಾಡಿ, ಹಿಂದೂ ದೇವತೆಗಳಿಗೆ ಅವಮಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.