ಬೆಂಗಳೂರು, ಆ 30 (DaijiworldNews/MS): 'ಭಾಂಗ್' ಅಥವಾ ’ಭಂಗಿ ’ಯನ್ನು ಮಾದಕವಸ್ತು ಮತ್ತು ಅಮಲು ಪದಾರ್ಥಗಳ ಕಾಯ್ದೆಯಡಿ ನಿಷೇಧಿತ ಪದಾರ್ಥ ಅಥವಾ ಪಾನಿಯ ಎಂಬುವುದಾಗಿ 'ಭಾಂಗ್' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟಾನ್ಸ್ (ಎನ್ಡಿಪಿಎಸ್) ಕಾಯ್ದೆಯಡಿ 'ಭಾಂಗ್' ಅನ್ನು ನಿಷೇಧಿತ ಡ್ರಗ್ ಅಥವಾ ಪಾನೀಯ ಎಂದು ಘೋಷಿಸಲಾಗಿಲ್ಲ ಎಂದ ಹೈಕೋರ್ಟ್ 29 ಕಿಲೋಗ್ರಾಂಗಳಷ್ಟು 'ಭಾಂಗ್' ಮಿಶ್ರಣವನ್ನು ಸಾಗಿಸುವ ಆರೋಪದಡಿ ಬಂಧಿಸಲ್ಪಟ್ಟ ವ್ಯಕ್ತಿಗೆ ಜಾಮೀನು ನೀಡಿದೆ.
ಬೇಗೂರು ಪೊಲೀಸರು ಜೂನ್ 1 ರಂದು ಬಿಹಾರ ಮೂಲದ ರೋಷನ್ ಕುಮಾರ್ ಮಿಶ್ರಾ ಎಂಬಾತನನ್ನು ಬಂಧಿಸಿ ಆತನಿಂದ 'ಭಾಂಗ್' ಅನ್ನು ವಶಪಡಿಸಿಕೊಂಡಿದ್ದರು. ಮಿಶ್ರಾ ಅವರ ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯವು ತಿರಸ್ಕರಿಸಿದ ಕಾರಣ ಹೈಕೋರ್ಟ್ ಕದ ತಟ್ಟಿದ್ದರು.
ಭಾಂಗ್ ಅನ್ನು ಚರಸ್ ಅಥವಾ ಗಾಂಜಾ ಅಥವಾ ಗಾಂಜಾ ಎಲೆಗಳಿಂದ ತಯಾರಿಸಲಾಗುತ್ತದೆ ಎಂದು ಸಾಬೀತುಪಡಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಉತ್ತರ ಭಾರತದ ಕಡೆ ಭಂಗಿ ಸೇವನೆ ಸಾಮಾನ್ಯ. ಅಲ್ಲಿ ಮಳಿಗೆಗಳಲ್ಲೂ ಭಂಗಿ ಸಿಗುತ್ತದೆ . ಹಾಗಾಗಿ ಜಾಮೀನು ಕೊಡಬಹುದು ಎಂದು ಹೈಕೋರ್ಟ್ ಹೇಳಿದೆ.
ಬಂಧನದ ವೇಳೆ ಮಿಶ್ರಾ ಬಳಿ 400 ಗ್ರಾಂ ಗಾಂಜಾ ಇತ್ತು.ಇದು ಕಡಿಮೆ ಪ್ರಮಾಣದ್ದಾಗಿದ್ದರಿಂದ ಜಾಮೀನು ಪಡೆಯಲು ಅರ್ಹರಾಗಿದ್ದರು.ಜಾಮೀನು ಷರತ್ತಿನಂತೆ 2 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ನೀಡುವಂತೆ ಕೋರ್ಟ್ ಸೂಚಿಸಿದೆ.