ವಿಜಯಪುರ, ಆ 30 (DaijiworldNews/MS): ನನ್ನ ರಾಜೀನಾಮೆಯಿಂದ ಚಿರತೆ ಸಿಗುವುದಾದರೆ ನಾಳೆ ಬೆಳಿಗ್ಗೆ ನಾನು ರಾಜೀನಾಮೆ ಕೊಡಲು ಸಿದ್ದ ಎಂದು ಬೆಳಗಾವಿಯಲ್ಲಿ ಚಿರತೆಯ ಸೆರೆಯ ಕಾರ್ಯಾಚರಣೆ ವಿಚಾರವಾಗಿ ವಿಜಯಪುರದಲ್ಲಿ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಆ. 29 ರಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಪತ್ತೆಯಾಗಿರುವ ಚಿರತೆಯನ್ನು ಹಿಡಿಯಲಾಗದ ಕಾರಣ ನನ್ನ ವಿರೋಧಿಗಳು ರಾಜೀನಾಮೆ ಕೇಳುತ್ತಿದ್ದಾರೆ. ಚಿರತೆ ಸಿಕ್ಕರೆ ನಂದೇನು ತಕರಾರಿಲ್ಲ. ರಾಜೀನಾಮೆ ನೀಡದ ತಕ್ಷಣ ಚಿರತೆ ಸಿಗುವುದಾದರೆ ನಾನು ಪದತ್ಯಾಗಕ್ಕೆ ಸಿದ್ದ ಎಂದು ಹೇಳಿದ್ದಾರೆ
ಚಿರತೆ ಹಿಡಿಯಲು ಉತ್ತರ ಕರ್ನಾಟಕ ಭಾಗದ ಸಿಬ್ಬಂದಿಗಳನ್ನು ನಿಯೋಜಿಸಿದ್ದೇವೆ. ಪಳಗಿದ ಆನೆಗಳನ್ನು ತಂದಿದ್ದೇವೆ. ಎರಡು ದಿನಗಳಿಂದ ಚಿರತೆ ಬೆಳಗಾವಿ ಪಟ್ಟಣದಲ್ಲಿ ಕಂಡುಬಂದಿಲ್ಲ. ಇಲ್ಲಿಯವರೆಗೆ ಚಿರತೆ ಯಾರಿಗೂ ಏನೂ ಮಾಡಿಲ್ಲ ಎನ್ನುವುದೇ ಸಮಾಧಾನದ ಸಂಗತಿ , ಆದರೆ ಚಿರತೆ ಸೆರೆ ಸಿಕ್ಕಿಲ್ಲ. ಅದು ಬೆಟ್ಟಕ್ಕೆ ಹೋಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ವಿವರಿಸಿದರು.