ಬಂಗಾಳ, ಆ 29 (DaijiworldNews/HR): ನನ್ನನ್ನೂ ಬಂಧಿಸಿ ನಾನು ಜೈಲಿನಿಂದಲೇ ಹೋರಾಡಿ ಗೆಲ್ಲುತ್ತೇನೆ ಎಂದು ತಮ್ಮ ಪಕ್ಷ ತೃಣಮೂಲ ಕಾಂಗ್ರೆಸ್ ವಿರುದ್ಧದ ಭ್ರಷ್ಟಾಚಾರದ ಆರೋಪದ ಮೇಲೆ ಬಿಜೆಪಿ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿ ನಾಯಕರು ಬೇಟಿ ಬಚಾವೋ ಬಗ್ಗೆ ಮಾತನಾಡುತ್ತಾರೆ, ಆದರೆ ಅವರ ಸರ್ಕಾರ ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಭಾಗಿಯಾದವರನ್ನ ಉಳಿಸಿದೆ. ಇನ್ನು ಅವರು ಟಿಎಂಸಿ ಮತ್ತು ನಮ್ಮನ್ನ ಕಳ್ಳರು ಎಂದು ಕರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಬಿಜೆಪಿಯವರು ನಮ್ಮ ನಾಯಕರ ಹಿಂಬಾಲಿಸುತ್ತಿದ್ದಾರೆ. ನನ್ನನ್ನ ಬಂಧಿಸಿ ಎಂದು ಸವಾಲು ಹಾಕುತ್ತೇನೆ, ನಾನು ಜೈಲಿನಿಂದಲೇ ಹೋರಾಡಿ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.