ಬಸ್ತಿ, ಆ 29 (DaijiworldNews/HR): ಅಂತರ್ಧರ್ಮೀಯ ಸಂಬಂಧದ ಕಾರಣ ಯುವಕ ಮತ್ತು ಬಾಲಕಿಯನ್ನು ಕುಟುಂಬಸ್ಥರೇ ಹತ್ಯೆ ಮಾಡಿರುವ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.
ದಂಪತಿಗಳನ್ನು ಹತ್ಯೆಗೈದ ಬಾಲಕಿ ಮನೆಯವರು, ಆಕೆಯ ಶವವನ್ನು ಹೂತು ಹಾಕಿದ್ದು, ಯುವಕನ ಶವವನ್ನು ಸಮೀಪದ ಕಬ್ಬಿನ ಗದ್ದೆಗೆ ಎಸೆದಿದ್ದಾರೆ ಎನ್ನಲಾಗಿದೆ.
ರೈತನೊಬ್ಬ ತನ್ನ ಕಬ್ಬಿನ ಗದ್ದೆಯಲ್ಲಿ ಯುವಕನ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದ್ದು, ಈ ಬಗ್ಗೆ ರುಧೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಯುವಕನ ದೇಹದ ಮೇಲೆ ಹಲವಾರು ಗಾಯದ ಗುರುತುಗಳು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದಿದ್ದಾರೆ.